ಬಿಜೆಪಿ ಶಾಸಕರ ಭ್ರಷ್ಟಾಚಾರ ಅಕ್ರಮವನ್ನು ಬಹಿರಂಗ ಪಡಿಸುತ್ತಿದ್ದ ಪದ್ಮನಾಬ್ ಸಾಮಂತ್ ಸಾವು ಆತ್ಮಹತ್ಯೆ ಅಲ್ಲ ವ್ಯವಸ್ಥಿತ ಕೊಲೆ ಎಂಬ ಸಂಶಯ : ಸಮಗ್ರ ತನಿಖೆಗೆ SDPI ಒತ್ತಾಯ

Prasthutha|

- Advertisement -

ಮಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಕರಾವಳಿಯ ಬಿಜೆಪಿ ಶಾಸಕರ ಅಕ್ರಮ ಭ್ರಷ್ಟಾಚಾರವನ್ನು ಸಾಕ್ಷಿ ಸಮೇತ ಬಹಿರಂಗ ಪಡಿಸುತ್ತಾ ಕಾನೂನು ಹೋರಾಟ ಮಾಡುತ್ತಿದ್ದ ಕಾಂಗ್ರೆಸ್ ನ ದ.ಕ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಹಾಗೂ RTI ಕಾರ್ಯಕರ್ತನಾಗಿದ್ದ ಬಂಟ್ವಾಳದ ಪದ್ಮನಾಬ್ ಸಮಂತ್ ಎಂಬವರ ಮೃತ ದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಿಕ್ಕಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ,ಇದು ಆತ್ಮಹತ್ಯೆ ಅಲ್ಲ ವ್ಯವಸ್ಥಿತ ಕೊಲೆ ಎಂಬ ಸಂಶಯ ಸಾರ್ವಜನಿಕರಲ್ಲಿ ಇದೆ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ರವರು ಪದ್ಮನಾಬ್ ಸಮಂತ್ ರವರು RTI ಕಾರ್ಯಕರ್ತನಾಗಿ ಬಿಜೆಪಿಯ ಹಲವಾರು ಭ್ರಷ್ಟಾಚಾರಗಳನ್ನು ಹೊರಗೆಡವಿದ್ದಾರೆ ಹಾಗೂ ಅವರ ವಿರುದ್ಧ ಕಾನೂನು ಹೋರಾಟವನ್ನು ಕೂಡ ನಡೆಸಿಕೊಂಡು ಬಂದಿದ್ದಾರೆ. ಪದ್ಮನಾಬ್ ರವರಿಗೆ ಕೊಲೆ ಬೆದರಿಕೆ ಇತ್ತು ಎಂಬ ಮಾತು ಈಗ ಎಲ್ಲೆಡೆ ಕೇಳಿ ಬರುತ್ತಿದೆ.
ಅದಲ್ಲದೇ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಕಲ್ಲಡ್ಕದಲ್ಲಿ ಬಿಜೆಪಿ ಕಾರ್ಯಕರ್ತರು ಇವರ ಮೇಲೆ ಹಲ್ಲೆಯನ್ನು ನಡೆಸಿದ್ದರು ಹಾಗೂ ಅದು ಪ್ರಕರಣ ಕೂಡ ದಾಖಲಾಗಿರುತ್ತದೆ.
ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ರವರು ಅಧ್ಯಕ್ಷತೆ ವಹಿಸಿದ್ದ 2018-23 ನೇ ಸಾಲಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಭೂ ಮಾಫಿಯಾದ ಅಕ್ರಮ ಸಕ್ರಮದಲ್ಲಿ ಪತ್ರಿಕಾ ಮಾಧ್ಯಮಕ್ಕೆ ಸಂಬಂಧಪಟ್ಟ ಬೆಳ್ತಂಗಡಿಯ ವ್ಯಕ್ತಿಯ ಮನೆಗೆ ಬಂಟ್ವಾಳದಲ್ಲಿ ಅಕ್ರಮವಾಗಿ 4 ಎಕ್ರೆ ಜಮೀನು ಮಂಜೂರು ಮಾಡಿದ ವಿಚಾರ ,ಬಂಟ್ವಾಳ ಪುರಸಭೆ ಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ದಾಖಲೆ ಸಮೇತ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿ ಭ್ರಷ್ಟರ ವಿರುದ್ಧ ತೊಡೆ ತಟ್ಟಿ ನಿಂತಿದ್ದರು.
28 ನೇ ತಾರೀಖಿನಂದು ಬಿಸಿರೋಡ್ ನಲ್ಲಿ ನಡೆದಿದ್ದ ಕಾಂಗ್ರೆಸ್ ನ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿ ಇದೆ.ಅವರನ್ನು ಬಲ್ಲವರು ಹಾಗೂ ಅವರ ಇತ್ತೀಚಿನ ಫೇಸ್‌ಬುಕ್‌ ಪೋಸ್ಟ್‌ ಗಳನ್ನು ನೋಡುವಾಗ ಅವರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ ಎಂದು ತಿಳಿದುಬರುತ್ತದೆ. ಹಾಗಾಗಿ ಇದೊಂದು ವ್ಯವಸ್ಥಿತ ಕೊಲೆಯಾಗಿದೆ,ಪ್ರಶ್ನಿಸುವವರನ್ನು ಹದ್ದು ಬಸ್ತಿನಲ್ಲಿಡಲು ಯತ್ನಿಸುವವರ ಕೃತ್ಯ ಎಂಬಂತೆ ಭಾಸವಾಗುತ್ತದೆ, ಹಾಗಾಗಿ ಸರ್ಕಾರ ಹಾಗೂ ಪೋಲಿಸ್ ಇಲಾಖೆ ಈ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ಆರೋಪಿಗಳಿಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಪ್ರಕಟನೆಯ ಮ‌ೂಲಕ ಒತ್ತಾಯಿಸಿದ್ದಾರೆ.

Join Whatsapp