ಲಕ್ನೋ: ಉತ್ತರಪ್ರದೇಶದ ಪಶು ಸಂಗೋಪನಾ ಸಚಿವ ಧರಂಪಾಲ್ ಸಿಂಗ್ ಸೈನಿ ಅವರು ರೈಲು ಹತ್ತಲು ತಡವಾಯಿತು ಎಂದು ತಮ್ಮ ಕಾರನ್ನು ನೇರವಾಗಿ ರೈಲ್ವೇ ಪ್ಲಾಟ್ಫಾರ್ಮ್’ಗೆ ನುಗ್ಗಿಸಿದ ಘಟನೆ ಬೆಳಕಿಗೆ ಬಂದಿದೆ.
ಸಚಿವರು ತಮ್ಮ ಕಾರನ್ನು ರೈಲು ನಿಲ್ದಾಣದೊಳಗೆ ಚಲಾಯಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಸಚಿವರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ವೈರಲ್ ಆದ ವಿಡಿಯೋ ಕುರಿತು ವಿಪಕ್ಷ ನಾಯಕ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ಸಚಿವರು ಪ್ಲಾಟ್ ಫಾರ್ಮ್ ಗೆ ಬುಲ್ಡೋಜರ್ ಕೊಂಡೊಯ್ಯದಿದ್ದಕ್ಕೆ ಜನರು ಅವರಿಗೆ ಕೃತಜ್ಞರಾಗಿರಬೇಕು ಎಂದು ಟೀಕಿಸಿದ್ದಾರೆ.
पशुधन मंत्री धर्मपाल सिंह ट्रेन पकड़ने में हुए लेट तो स्टेशन के प्लेटफार्म तक घुसा दी अपनी कार। इससे लखनऊ के चारबाग स्टेशन के प्लेटफार्म नंबर 1 पर अफरातफरी का मच गई। #DharmpalSingh #Charbhagh @samajwadiparty @AamAadmiParty @yadavakhilesh pic.twitter.com/YOYxqx067e
— Punjab Kesari-UP/UK (@UPkesari) August 24, 2023