ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಭಾರತ ಆರ್ಥಿಕತೆಗೆ ಪ್ರತಿವರ್ಷ ಜಿಡಿಪಿಯ ಶೇ 10ರಷ್ಟು ಪ್ರಗತಿ ಸಾಧಿಸುವ ಸಾಮರ್ಥ್ಯವಿದೆ. ಇದರ ಮೂಲಕ 10 ವರ್ಷಗಳಲ್ಲಿ ನಿರುದ್ಯೋಗವನ್ನು ಕೊನೆಗೊಳಿಸುವ ಶಕ್ತಿ ಹೊಂದಿದೆ. ಈ ಮೂಲಕ ಬಡತನವನ್ನು ತೊಡೆದುಹಾಕಲು ಶಕ್ತವಾಗಿದೆ. ಆದರೆ ಹಣಕಾಸು ಇಲಾಖೆಗೆ ಇದರ ಸುಳಿವೇ ಇಲ್ಲ. ಮೋದಿ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥರು… ಎಂದು ಗೇಲಿ ಮಾಡಿದ್ದಾರೆ.
It is pity that Indian economy which has the potential to grow at least 10 percent per year in GDP and thus end unemployment and eliminate poverty in less than 10 years. But MoF is clueless and Modi is illiterate in economics. So alas!!
— Subramanian Swamy (@Swamy39) June 17, 2023