ಬಿಜೆಪಿ ನಾಯಕಿ ಸೋನಾಲಿ ಫೋಗಟ್ ನೀಡಿರುವ ಮಾದಕ ದ್ರವ್ಯದಲ್ಲಿ ರಾಸಾಯನಿಕ ಬೆರಕೆ; ತಪ್ಪೊಪ್ಪಿಕೊಂಡ ಆರೋಪಿಗಳು

Prasthutha|

ಗೋವಾ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರಿಗೆ ಪಾರ್ಟಿಯೊಂದರಲ್ಲಿ ಮಾದಕ ದ್ರವ್ಯಕ್ಕೆ ರಾಸಾಯನಿಕವನ್ನು ಬೆರೆಸಿ ಬಲವಂತವಾಗಿ ಕುಡಿಸಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

- Advertisement -

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಸುಧೀರ್ ಸಂಗ್ವಾನ್ ಮತ್ತು ಆತನ ಸಹಚರ ಸುಖ್ವಿಂದರ್ ಸಿಂಗ್ ಅವರು ಸೋನಾಲಿ ಫೋಗಟ್ ರೊಂದಿಗೆ ಕ್ಲಬ್ ಒಂದರಲ್ಲಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಅವರಲ್ಲಿ ಒಬ್ಬರು ಆಕೆಗೆ ಬಲವಂತವಾಗಿ ರಾಸಾಯನಿಕವನ್ನು ಸೇವಿಸುವಂತೆ ಒತ್ತಾಯ ಮಾಡಿರುವುದು  ವೀಡಿಯೊ ಆಧಾರದಲ್ಲಿ  ಸಾಬೀತಾಗಿದೆ. ಅಲ್ಲದೆ, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಐಜಿಪಿ ಓಂವೀರ್ ಸಿಂಗ್ ಬಿಷ್ಣೋಯ್  ಪತ್ರಿಕಾಗೋಷ್ಟಿಯಲ್ಲಿ ಬಹಿರಂಗ ಪಡಿಸಿದ್ದಾರೆ.

ಬಿಜೆಪಿ ನಾಯಕಿ, ನಟಿ ಸೊನಾಲಿ ಫೋಗಟ್ (42) ಸೋಮವಾರ ರಾತ್ರಿ ಗೋವಾದಲ್ಲಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಅವರು ಸಾವಿಗೀಡಾಗಿರುವುದಾಗಿ ಮೊದಲಿಗೆ ಹೇಳಲಾಗಿತ್ತು. ಆದರೆ  ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದ ಮೇಲೆ ಗಾಯಗಳಾಗಿರುವುದು ಕಂಡು ಬಂದಿದ್ದರಿಂದ ನಟಿ ಕೊಲೆಯಾಗಿರುವುದಾಗಿ ಶಂಕಿಸಲಾಗಿದೆ.

Join Whatsapp