ಯಾದಗಿರಿಯಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಆಸ್ತಿ ಮಾರಿ ₹1 ಕೋಟಿ ನೀಡುವೆ ಎಂದ ಬಿಜೆಪಿ ಮುಖಂಡ!

Prasthutha|

ಯಾದಗಿರಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ನನ್ನ ಆಸ್ತಿ ಮಾರಿ 1 ಕೋಟಿ ನೀಡುವೆ ಎಂದು ಬಿಜೆಪಿ ಮುಖಂಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರರಾಯ ನಾಗರಾಳ ಹುಲಕಲ್ ಘೋಷಣೆ ಮಾಡಿದ್ದಾರೆ.

“ಸಿದ್ದರಾಮಯ್ಯ ಯಾದಗಿರಿಯಲ್ಲಿ ಸ್ಪರ್ಧಿಸುವುದಾದಾರೆ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಸಿದ್ದರಾಮಯ್ಯ ಅವರ ಚುನಾವಣಾ ಖರ್ಚು ನಿಭಾಯಿಸುವೆ. ಅವರು ಸ್ಪರ್ಧಿಸಿದರೆ, ಯಾದಗಿರಿ ಸೇರಿ ಇಡೀ
ಜಿಲ್ಲೆ ಅಭಿವೃದ್ಧಿಯಾಗುವುದು” ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

- Advertisement -