ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚಿಸಿದ ಬಿಜೆಪಿ ನಾಯಕಿ

Prasthutha|

ಶಿವಮೊಗ್ಗ: ರೈಲ್ವೆ ಇಲಾಖೆಯಲ್ಲಿ ಸರಕಾರಿ ಕೆಲಸ ಮತ್ತು ಟೆಂಡರ್ ಕೊಡಿಸುವುದಾಗಿ ಬಿಜೆಪಿ ನಾಯಕಿಯೊಬ್ಬರು ಮೂವರಿಗೆ ಬರೋಬ್ಬರಿ 14 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

- Advertisement -

 ಹೊಸನಗರ ತಾಲೂಕಿನ ರಿಪ್ಪನಪೇಟೆ ಪಟ್ಟಣದ ಶ್ವೇತಾ ಎಂಬ ಮಹಿಳೆಯು ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಜೊತೆಗೆ ಸಕ್ರೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮಾಜಿ ಗೃಹ ಸಚಿವ ಆರಗ ಜ್ಷಾನೇಂದ್ರ, ಸಂಸದ ಬಿ. ವೈ ರಾಘವೇಂದ್ರ ಸೇರಿದಂತೆ ಹಲವು ಗಣ್ಯರ ಜೊತೆ ಇವರ ಹಲವಾರು ಫೋಟೋಗಳಿವೆ. ಇನ್ನು ಆರೋಪಿ ಮಹಿಳೆಗೆ ಒಂದು ಮಗು ಕೂಡ ಇದ್ದು, ಪತಿಯ ಜೊತೆ ಡೈವರ್ಸ್ ಆಗಿದೆ. ಈ ನಡುವೆ ಶ್ವೇತಾ ತನ್ನ ಪತಿ ಪ್ರಶಾಂತ ದೇಶಪಾಂಡೆ ರೇಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ರೇಲ್ವೆ ಇಲಾಖೆಯ ಪತಿಯ ಐಡಿ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಯುವಕರಿಗೆ ತೋರಿಸಿದ್ದಾರೆ. ಯುವಕರು ಇವರ ಬಣ್ಣದ ಮಾತಿಗೆ ಮರುಳಾಗಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.

ವಂಚಕಿ ಶ್ವೇತಾ ಬಳಿ ತಾವು ಕೊಟ್ಟಿರುವ ಹಣ ವಾಪಸ್ ಕೇಳಿದರೆ ಹಣ ಕೊಡದೇ ಸತಾಯಿಸುತ್ತಿದ್ದಾಳೆ. ಅಲ್ಲದೇ ಹಣ ಕೇಳಿದರೆ ನಿಮ್ಮ ಮೇಲೆ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾಳಂತೆ. ಈ ಕುರಿತು ವಂಚನೆಗೊಳಗಾದ ಆದರ್ಶ ಮತ್ತು ನವೀನ್ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

ಜಿಲ್ಲೆಯ ಎಂಟಕ್ಕೂ ಹೆಚ್ಚು ಯುವಕರಿಗೆ ಮೋಸ

ರೇಲ್ವೆ ಇಲಾಖೆಯಲ್ಲಿ ಉದ್ಯೋಗ ಸಿಗುತ್ತದೆ ಎಂದು ಕಳೆದ ಒಂದು ವರ್ಷದಲ್ಲಿ ರಿಪ್ಪನಪೇಟೆಯ ಮೂವರು ಯುವಕರು 16 ಲಕ್ಷ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ 8ಕ್ಕೂ ಹೆಚ್ಚು ಯುವಕರಿಗೆ ಶ್ವೇತಾ ವಂಚನೆ ಮಾಡಿದ್ದಾರಂತೆ. ಇದು ಶಿವಮೊಗ್ಗ ಜಿಲ್ಲೆಗೆ ಮಾತ್ರ ಸಿಮೀತವಾಗಿಲ್ಲ. ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಅನೇಕ ಯುವಕರಿಗೆ ರೇಲ್ವೆ ಇಲಾಖೆಯಲ್ಲಿ ಉದ್ಯೋಗದ ಹೆಸರಿನಲ್ಲಿ ಶ್ವೇತಾ ಮತ್ತು ಆಕೆಯ ನಕಲಿ ಪತಿ ಪ್ರಶಾಂತ ದೇಶಪಾಂಡೆಯು ವಂಚನೆ ಮಾಡಿದ್ದಾರಂತೆ.

ದೂರು ದಾಖಲಾಗುತ್ತಿದ್ದಂತೆ ಶ್ವೇತಾ ಎಸ್ಕೇಪ್

ಶ್ವೇತಾ ವಿರುದ್ಧ ಎಫ್​ಆರ್​ಐ ದಾಖಲು ಆಗುತ್ತಿದ್ದಂತೆ ಅವಳು ಎಸ್ಕೇಪ್ ಆಗಿದ್ದಾಳೆ. ಸದ್ಯ ಶ್ವೇತಾ ಮತ್ತು ಪ್ರಶಾಂತ ದೇಶಪಾಂಡೆ ವಿರುದ್ಧ ಕೇಸ್ ದಾಖಲಾಗಿದೆ. ಶ್ವೇತಾ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಓಡಾಡಿಕೊಂಡಿದ್ದಳು. ಎಲ್ಲರ ಜೊತೆ ಫೋಟೋ ತೆಗೆಸಿಕೊಂಡಿದ್ದಾಳೆ. ಇಂತಹ ಚಾಲಾಕಿ ಶ್ವೇತಾ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾಳಂತೆ. ತಾನು ಡಾಕ್ಟರೇಟ್ ಪದವಿ ಪಡೆದುಕೊಂಡಿರುವ ಫೋಟೋಗಳನ್ನು ತನ್ನ ಫೇಸ್ ಬುಕ್​ನಲ್ಲಿ ಹಾಕಿಕೊಂಡಿದ್ದಾಳೆ. ರಾಜಕಾರಣಿ, ವ್ಯಾಪಾರಸ್ಥೆ, ರೇಲ್ವೆ ಇಲಾಖೆಯ ಪತ್ನಿ ಸೇರಿದಂತೆ ಹತ್ತು ಹಲವು ರೂಪಗಳಲ್ಲಿ ಶ್ವೇತಾ ಕಂಡು ಬಂದಿದ್ದಾರೆ.

ಶ್ವೇತಾ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ಶ್ವೇತಾ ಪತ್ತೆಗಾಗಿ ಶೋಧ ನಡೆಸಿದ್ದಾರೆ.

Join Whatsapp