ಸುದ್ದಿವಾಹಿನಿ ಚರ್ಚೆಯ ನೇರಪ್ರಸಾರದಲ್ಲಿ ಬಿಜೆಪಿ ನಾಯಕನ ಮೇಲೆ ಶಾಸಕನಿಂದ ಹಲ್ಲೆ

Prasthutha|

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯ ಕುರಿತು ತೆಲುಗು ಸುದ್ದಿ ವಾಹಿನಿಯೊಂದು ಚರ್ಚೆಯನ್ನು ಆಯೋಜಿಸಿತ್ತು. ನೇರಪ್ರಸಾರ ಕಾರ್ಯಕ್ರಮದಲ್ಲಿ ಆಡಳಿತಾರೂಢ ಬಿಆರ್ ಎಸ್ ಶಾಸಕರೊಬ್ಬರು, ಬಿಜೆಪಿ ಮುಖಂಡನ ಮೇಲೆ ಬಹಿರಂಗ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದೆ.

- Advertisement -


ಆದರೆ, ಪೊಲೀಸರು ಮತ್ತು ಇತರರು ಮಧ್ಯಪ್ರವೇಶಿಸಿ ಇಬ್ಬರನ್ನು ಶಾಂತಗೊಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೈದರಾಬಾದ್ ನ ಕುತ್ಬುಳ್ಳಾಪುರದ ಬಿಆರ್ ಎಸ್ ಶಾಸಕ ಕೆಪಿ ವಿವೇಕಾನಂದ ಅವರು ಕುನಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಶೈಲಂ ಗೌಡ್ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ಕಾರಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಆರೋಪಿಸಿದ್ದಾರೆ.

- Advertisement -