ನವದೆಹಲಿ: ದಲಿತ ನಾಯಕ ಬಾಬು ಜಗಜೀವನ್ ರಾಮ್ ಜನ್ಮದಿನದಂದು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಎದ್ದು ಬಂದಿದ್ದಾರೆ. ಇದೇನಿದು ಸತ್ತವರೂ ಬದುಕಿ ಬಂದು ಜನ್ಮದಿನಕ್ಕೆ ಹಾರೈಸುತ್ತಾರಾ ಎಂದು ಗಾಬರಿಗೊಳ್ಳಬೇಡಿ. ಏಪ್ರಿಲ್ 5ರಂದು ಬಾಬು ಜಗಜೀವನ್ ರಾಮ್ ರ 115ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟ್ವೀಟ್ ಟ್ರೋಲರ್ ಗಳ ಆಹಾರವಾಗಿದೆ. 2019ರಲ್ಲಿ ನಿಧನರಾಗಿದ್ದ ಅರುಣ್ ಜೇಟ್ಲಿಯೊಂದಿಗಿದ್ದ ಫೋಟೋವನ್ನು ಬಳಸಿ ಪ್ರಧಾನಿ ಮೋದಿ ಜಗಜೀವನ್ ಹುಟ್ಟುಹಬ್ಬವನ್ನು ಸ್ಮರಿಸಿದ್ದು ಸಖತ್ ಟ್ರೋಲಾಗಿದೆ.
ಟ್ವೀಟ್ ನಲ್ಲಿ, “ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ಅವರಿಗೆ ನಮನಗಳು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮತ್ತು ಸ್ವಾತಂತ್ರ್ಯದ ನಂತರ ಅವರ ಗಮನಾರ್ಹ ಕೊಡುಗೆಯನ್ನು ನಮ್ಮ ದೇಶವು ಯಾವಾಗಲೂ ಸ್ಮರಿಸುತ್ತದೆ. ಅವರ ಆಡಳಿತ ಕೌಶಲ್ಯ ಮತ್ತು ಬಡವರ ಮೇಲಿನ ಕಾಳಜಿಗಾಗಿ ಅವರು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ” ಎಂದು ಅರುಣ್ ಜೇಟ್ಲಿಯೊಂದಿಗೆ ಜಗಜೀವನ್ ಫೋಟೋಗೆ ನಮಿಸುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಬಗ್ಗೆ ಕಾಳೆಲೆದಿರುವ ನೆಟ್ಟಿಗರು “ತಮ್ಮ ಹರಿದು ಬಿಟ್ಟ ಚಿತಾಭಸ್ಮದಿಂದ ಜೇಟ್ಲಿಯವರು ಎದ್ದು ಬಂದರು” ಎಂದಿದ್ದಾರೆ. ಇನ್ನೂ ಕೆಲವರು ಸತ್ತವರು ಜನ್ಮದಿನಕ್ಕೆ ಬಂದು ಶುಭ ಹಾರೈಸುತ್ತಾರಾ ಎಂದು ಟ್ವೀಟ್ ಬಗ್ಗೆ ಪ್ರಶ್ನಿಸಿದ್ದಾರೆ. ಅದಾಗ್ಯೂ ಹಳೆ ಫೋಟೊ ಬಳಸಿ ನಮನ ಸಲ್ಲಿಸಿರುವ ಟ್ವೀಟ್ ಅನ್ನೂ ಇನ್ನೂ ಪ್ರಧಾನಿ ಖಾತೆಯಿಂದ ಅಳಿಸಿಲ್ಲ.