ಮೀರತ್: ಮುಸ್ಲಿಮ್ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಯುವ ಹಿಂದೂ ವಾಹಿನಿಯ ಮುಖಂಡೆ ಹಾಗೂ ಬಿಜೆಪಿ ನಾಯಕಿ ಮೀನಾಕ್ಷಿ ಚೌಹಾಣ್ ರನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ.
ಮೀನಾಕ್ಷಿ ಸಹೋದರ ಮತ್ತು ಆಕೆಯ ಮಗ ಅಮಲು ಪದಾರ್ಥ ನೀಡಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ದೂರಿದ್ದಳು. ಅಲ್ಲದೆ, ಅತ್ಯಾಚಾರ ನಡೆದ ಕುರಿತು ಮೀನಾಕ್ಷಿ ಬಳಿ ಹೇಳಿದಾಗ ನೂರು ಗೋವುಗಳನ್ನು ದಾನ ಮಾಡಿದ ಹಾಗೆ ಆಯಿತು ಎಂದು ಹೇಳಿ ತನ್ನನ್ನು ಬೆದರಿಸಿದರು. ಮಾತ್ರವಲ್ಲದೆ, ಪೊಲೀಸರಲ್ಲಿ ದೂರು ನೀಡಿದರೆ ಮುಖ ತೋರಿಸಲು ಲಾಯಕ್ ಇಲ್ಲದಂತೆ ಮಾಡುತ್ತೇನೆ ಎಂದು ಥಳಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದರು ಎಂದು ಸಂತ್ರಸ್ತ ಬಾಲಕಿ ದೂರಿನಲ್ಲಿ ಆರೋಪಿಸಿದ್ದಳು.
ಮಂಗಳವಾರ ಮೀನಾಕ್ಷಿ ಚೌಹಾಣ್ ಮನೆಯಲ್ಲಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಪೊಲೀಸರು ಮೀನಾಕ್ಷಿ ಮನೆ ಮೇಲೆ ದಾಳಿ ನಡೆಸಿ ಆಕೆಯನ್ನು ಬಂಧಿಸಿದ್ದಾರೆ.