ಮಹಿಳೆಗೆ ಹಲ್ಲೆ ಮಾಡಿ ಪರಾರಿಯಾದ ಬಿಜೆಪಿ ಮುಖಂಡನ ಬಂಧನ

Prasthutha|

ನೋಯ್ಡಾ: ಕಳೆದ ವಾರ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯನ್ನು ನಿಂದಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿಯನ್ನು ಮೀರತ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

- Advertisement -


ಹೌಸಿಂಗ್ ಸೊಸೈಟಿಯೊಳಗೆ ಮಹಿಳೆಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ವಿರುದ್ಧ ನೋಯ್ಡಾ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದರು.


ಸೋಮವಾರ ಅವರ ನಿವಾಸದಲ್ಲಿನ ಅಕ್ರಮ ನಿರ್ಮಾಣವನ್ನು ಬುಲ್ಡೋಜರ್ ಗಳು ನೆಲಸಮಗೊಳಿಸಿತ್ತು. ಇಂದು ಬಿಜೆಪಿ ಗೂಂಡಾ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp