ಮುಸ್ಲಿಂ ಪತ್ರಕರ್ತನ ಸಾವಿಗೆ ಕಾರಣನಾದ ಐಎಎಸ್ ಅಧಿಕಾರಿ ಪರ ಬಿಜೆಪಿ ಕೇರಳ ರಾಜ್ಯಾಧ್ಯಕ್ಷರ ವಕಾಲತ್ತು

Prasthutha|

ಕೊಲ್ಲಂ: ಸಿನಿಮಾ ನಟಿಗೆ ಹಲ್ಲೆಗೈದ ಪ್ರಕರಣದ ಆರೋಪಿ ನಟ ದಿಲೀಪ್ ಸಿನಿಮಾದಲ್ಲಿ ನಟಿಸಬಹುದಾದರೆ ಕುಡಿದು ವಾಹನ ಚಲಾಯಿಸಿ ಪತ್ರಕರ್ತನ ಸಾವಿಗೆ ಕಾರಣನಾದ ಐಎಎಸ್ ಅಧಿಕಾರಿ ಶ್ರೀರಾಂ ವೆಂಕಿಟರಾಮನ್ ಯಾಕೆ ಜಿಲ್ಲಾಧಿಕಾರಿಯಾಗಿ ಸೇವೆ ಮುಂದುವರಿಸಬಾರದು ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಪ್ರಶ್ನಿಸಿದ್ದಾರೆ.

- Advertisement -

ಕೊಲ್ಲಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಸುರೇಂದ್ರನ್ ಈ ರೀತಿಯಾಗಿ ಉತ್ತರಿಸಿದ್ದಾರೆ.

ಹಲ್ಲೆ ಸಂಬಂಧ ನಟ ದಿಲೀಪ್ ಮೇಲೆಯೂ ಆರೋಪವಿದೆ. ಪ್ರಕರಣ ತನಿಖೆಯಾಗಿ ಆರೋಪ ಸಾಬೀತಾದಲ್ಲಿ ಶಿಕ್ಷೆಯಾಗಲಿ. ಶ್ರೀರಾಂ ವೆಂಕಿಟರಾಮನ್ ಮೇಲೆಯೂ ಸದ್ಯ ಆರೋಪವಿದೆಯಷ್ಟೆ. ತನಿಖೆ ನಡೆಯುತ್ತಿದೆ. ಈ ನಡುವೆ ಅವರು ಯಾವುದೇ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಬಾರದು ಎಂದು ಸರಕಾರಕ್ಕೆ ಒತ್ತಡ ಹೇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

- Advertisement -

ಕೆಲವರ ತೀರ್ಮಾನವಷ್ಟೇ ಇಲ್ಲಿ ಅನುಷ್ಠಾನಕ್ಕೆ ಬರಬೇಕು ಎನ್ನುವುದನ್ನು ಒಪ್ಪಲು ಹೇಗೆ ಸಾಧ್ಯ. ಸರಕಾರ ಧಾರ್ಮಿಕ ಸಂಘಟನೆಗಳ ಒತ್ತಡಕ್ಕೆ ಮಣಿದಿದೆ ಎಂದು ಎಸ್ಸೆಸ್ಸೆಫ್ ಸಹಿತ ಇತರ ಸುನ್ನಿ ಸಂಘಟನೆಗಳು ನಡೆಸಿದ ಪ್ರತಿಭಟನೆಯನ್ನು ಗುರಿಯಾಗಿಸಿ ಸುರೇಂದ್ರನ್ ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಸುರೇಂದ್ರನ್ ಶ್ರೀರಾಂ ವೆಂಕಿಟರಾಮನ್ ಮತ್ತು ದಿಲೀಪ್ ನಡುವೆ ಹೋಲಿಕೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಸಾರ್ವಜನಿಕ ರಂಗ ಯಾವುದು, ಖಾಸಗಿ ರಂಗ ಯಾವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಿಳಿದಿಲ್ಲವೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

Join Whatsapp