ಬಿಜೆಪಿಯವರು ಕೆಲವರನ್ನು ನಾಯಿಗಳಂತೆ ಒದರಲು ಇಟ್ಟುಕೊಂಡಿದ್ದಾರೆ: ಯತ್ನಾಳ್‌ಗೆ ಸಚಿವ ತಿಮ್ಮಾಪುರ ತಿರುಗೇಟು

Prasthutha|

ಕೊಪ್ಪಳ: ಮನೆಯಲ್ಲಿ ಚಾಕು ಇರೋದು ಈರಳ್ಳಿ ಹೆಚ್ಚಲು ಮಾತ್ರ ಅಲ್ಲ ಎಂಬ ಯತ್ನಾಳ್ ಹೇಳಿಕೆಗೆ ಸಚಿವ ಆರ್.ಬಿ. ತಿಮ್ಮಾಪುರ ತಿರುಗೇಟು ನೀಡಿದ್ದು, ಬಿಜೆಪಿಯವರು ಕೆಲವರನ್ನು ನಾಯಿಗಳನ್ನು ಇಟ್ಟುಕೊಂಡಂತೆ ಒದರಲು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಇಂದು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ಚಾಕು ಇರೋದು ಈರಳ್ಳಿ ಹೆಚ್ಚಲು ಮಾತ್ರ ಅಲ್ಲ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದರು. ಯತ್ನಾಳ್ ಮಾತಿಗೆ ಯಾರೂ ಬೆಲೆ ಕೊಡಲ್ಲ. ಬಿಜೆಪಿಯಲ್ಲಿ ಕೆಲವರನ್ನು ಒದರಲು ಇಟ್ಟುಕೊಂಡಿದ್ದಾರೆ. ಬಿಜೆಪಿಯವರು ಕೆಲವರನ್ನು ನಾಯಿಗಳನ್ನು ಇಟ್ಟುಕೊಂಡಂತೆ ಒದರಲು ಇಟ್ಟು ಕೊಂಡಿರುತ್ತಾರೆ. ಹೀಗಾಗಿ ದಿನವಿಡೀ ಒದರುತ್ತಿರುತ್ತಾರೆ. ಅದಕ್ಕೆ ಏನೂ ಮಾಡೋಕಾಗಲ್ಲ ಎಂದು ಹೇಳಿದ್ದಾರೆ.



Join Whatsapp