ಬಿಜೆಪಿಯವರು ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ: ಸಿದ್ದರಾಮಯ್ಯ

Prasthutha|

ಬೆಳಗಾವಿ: ಬಿಜೆಪಿಯವರು ಹತಾಶರಾಗಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರ್ ಅಶೋಕ್ ಅವರ ಬಿನ್ ಲಾಡೆನ್ ಸರ್ಕಾರ ಎಂಬ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ.

- Advertisement -


ನಗರದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಸ್ಥರು ನ್ಯಾಯ ಸಿಕ್ಕಿಲ್ಲ, ಸಿಐಡಿ ತನಿಖೆ ಮಾಡಬೇಕು ಎಂದು ಮನವಿ ಕೊಟ್ಟಿದ್ದಾರೆ. ಕಾನೂನು ಇಲಾಖೆ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.


ಬೆಳಗಾವಿಯಲ್ಲಿ ಪೊಲೀಸರಿಂದ ಅಂಗವಿಕಲನ ಮೇಲೆ ಹಲ್ಲೆ ವಿಚಾರಕ್ಕೆ ಪಿಎಸ್ಐ ಮೇಲೆ ಡಿಪಾರ್ಟ್ಮೆಂಟ್ಗೆ ತನಿಖೆ ಮಾಡಲು ಸೂಚಿಸುತ್ತೇವೆ. ಹಲ್ಲೆ ಮಾಡಿರೋದು ತಪ್ಪು. ತಪ್ಪು ಮಾಡಿದವರ ಮೇಲೆ ಶಿಸ್ತಿನ ಕ್ರಮ ವಹಿಸುತ್ತೇವೆ ಎಂದರು.

- Advertisement -


ಗುತ್ತಿಗೆದಾರ ಬಾಕಿ ಬಿಲ್ ಪಾವತಿಗೆ ಕೆಂಪಣ್ಣ ಒತ್ತಾಯ ವಿಚಾರಕ್ಕೆ, ಹಣ ಬಾಕಿ ಉಳಿದಿರೋದು ಯಾರ ಕಾಲದಲ್ಲಿ ಆಗಿರೋ ಕೆಲಸ? ಬಾಕಿ ಉಳಿಸಿ ಹೋಗಿರೋದು ಹಿಂದಿನ ಸರ್ಕಾರದವರು. ಹಿಂದಿನ ಸರ್ಕಾರದ 2-3 ವರ್ಷ ಬಿಲ್ ಕೊಟ್ಟಿಲ್ಲ. ನಾವು ಬಂದು ಇನ್ನೂ 3 ತಿಂಗಳು ಆಗಿಲ್ಲ. ಬಿಲ್ ಕೊಡಬೇಕು ಅದರ ಬಗ್ಗೆ ಏನಿಲ್ಲ. ನಾವು 40% ಕಮಿಷನ್ ದಂಧೆಯ ಬಗ್ಗೆ ಮಾತನಾಡಿದ್ದೇವೆ. ಈ ಬಗ್ಗೆ ತನಿಖೆ ಮಾಡಬೇಕು ಎಂದರು.

Join Whatsapp