ಬಿಜೆಪಿ ದೇಶದ ವೈವಿಧ್ಯತೆಯನ್ನು ಬದಲಾಯಿಸಲು ಹೊರಟಿದೆ: ರಾಹುಲ್ ಗಾಂಧಿ

Prasthutha|

ಕಣ್ಣೂರು: ದಿನದಿಂದ ದಿನಕ್ಕೆ ಅಶಾಂತಿ ಸೃಷ್ಟಿಸುವ ಮೂಲಕ ಭಾರತೀಯ ಜನತಾ ಪಾರ್ಟಿ ಈ ದೇಶದ ವೈವಿಧ್ಯತೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

- Advertisement -

ಕೇರಳದ ಕಣ್ಣೂರಿನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮುಂಬರುವ ಚುನಾವಣೆ ಬರೀ ಚುನಾವಣೆಯಲ್ಲ, ದೇಶದ ಆಧುನಿಕ ಇತಿಹಾಸದಲ್ಲಿ ಭಾರತದ ಸಂವಿಧಾನ ಮತ್ತು ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ರಚನೆಯನ್ನು ಉಳಿಸುವ ಹೋರಾಟ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸರ್ಕಾರಿ ಸಂಸ್ಥೆಗಳನ್ನು ಬಿಜೆಪಿ ತನ್ನ ರಾಜಕೀಯ ಅಸ್ತ್ರಗಳಾಗಿ ಬಳಸಿಕೊಂಡು ದೇಶದ ಸ್ವಾರೂಪವನ್ನು ಬದಲಾಯಿಸಲು ಮುಂದಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟ ದೇಶದ ವೈವಿಧ್ಯತೆಯನ್ನು ಒಪ್ಪಿಕೊಳ್ಳುತ್ತವೆ. ಆದರೆ, ಬಿಜೆಪಿ ಜನರ ಮೇಲೆ ಏಕರೂಪ ನಾಗರೀಕ ಸಂಹಿತೆ (UCC)ಯನ್ನು ಹೇರುವ ಮೂಲಕ ದೇಶದ ವೈವಿಧ್ಯತೆಯನ್ನು ಬದಲಾಯಿಸಲು ಹೊರಟಿದೆ.

- Advertisement -

ನಾನು ಈ ಮೂಲಕ ಬಿಜೆಪಿಯವರಿಗೆ ಹೇಳಲು ಬಯಸುವುದು ಏನೆಂದರೆ, ನೀವು ವ್ಯರ್ಥ ಪ್ರಯತ್ನ ಮಾಡುವ ಮೂಲಕ ಜನರ ಸಮಯವನ್ನು ಹಾಳು ಮಾಡುತ್ತಿದ್ದೀರಿ. ಮುಂಬರುವ ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎಂದು ರಾಹುಲ್ ಗಾಂಧಿ ಭರವಸೆ ವ್ಯಕ್ತಪಡಿಸಿದ್ದಾರೆ.

Join Whatsapp