ಬಿಜೆಪಿ ಜನರ ಹಣ ಸುಲಿಗೆಯ ಪಕ್ಷ: ಭೂಪೇಶ್ ಬಘೇಲ್

Prasthutha|

ಶಿಮ್ಲಾ: ಬಿಜೆಪಿ ಎಂಬುದು ಜನರ ಹಣ ಸುಲಿಗೆ ಮಾಡುವ ಪಕ್ಷ. ಆದ್ದರಿಂದ ಮುಂದಿನ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮನವಿ ಮಾಡಿದ್ದಾರೆ.

- Advertisement -

 ಸೋಲನ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತ, ಜನಸಾಮಾನ್ಯರ ಕಿಸೆಗೆ ಕತ್ತರಿ ಹಾಕುವುದರಲ್ಲಿ ಬಿಜೆಪಿ ಪರಿಣಿತಿ ಹೊಂದಿದೆ ಎಂದು ಹೇಳಿದರು.

“ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಂಥವುಗಳ ಬೆಲೆ ಏರಿಸಿ ಬಿಜೆಪಿಯು ಜನಸಾಮಾನ್ಯರ ಕಿಸೆಯಿಂದ ಹಣ ಕಸಿಯುತ್ತಿದೆ. ಈಗ ಅವರು ರೊಟ್ಟಿಯ ಮೇಲೆ 5% ಮತ್ತು ಪರೋಟಾದ ಮೇಲೆ 18% ಜಿಎಸ್ ಟಿ ಹಾಕಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಮೂರನೇ ಎರಡು ಬಹುಮತದಿಂದ ಅಧಿಕಾರಕ್ಕೆ ತರಬೇಕು” ಎಂದು ಭೂಪೇಶ್ ಮನವಿ ಮಾಡಿದರು.

- Advertisement -

2018ರಲ್ಲಿ ಛತ್ತೀಸಗಡದಲ್ಲಿ ಚುನಾವಣೆ ವೇಳೆ ರೈತರ ಸಾಲವನ್ನು ಅಧಿಕಾರಕ್ಕೆ ಬಂದ 10 ಗಂಟೆಯೊಳಗೆ ಮನ್ನಾ ಮಾಡುವುದಾಗಿ ಹೇಳಿದ್ದೆವು. ಎರಡೇ ಗಂಟೆಯಲ್ಲಿ ಮನ್ನಾ ಮಾಡಿದೆವು ಎಂದು ಅವರು ತಿಳಿಸಿದರು.

“ಕಾಂಗ್ರೆಸ್ 10 ಖಚಿತ ಆಶ್ವಾಸನೆಗಳನ್ನು ನೀಡಿದೆ. ನಾವು ರಾಹುಲ್ ಗಾಂಧಿಯವರು ರೈತರ ಸಾಲ ಮನ್ನಾ 10 ಗಂಟೆಯೊಳಗೆ ಎಂದಿದ್ದರು. ನಾವು ಎರಡೇ ಗಂಟೆಯಲ್ಲಿ ಮಾಡಿದೆವು. ಇಲ್ಲಿಗೂ ನಾನು ಬರುವೆ” ಎಂದು ಭೂಪೇಶ್ ಆಶ್ವಾಸನೆ ನೀಡಿದರು.

ಇದಕ್ಕೆ ಮೊದಲು ಚುನಾವಣಾ ಆಯೋಗವು ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ಮತದಾನ ನಡೆಯುವುದೆಂದೂ, ಡಿಸೆಂಬರ್ 8ರಂದು ಮತ ಎಣಿಕೆ ನಡೆಯುವುದೆಂದೂ ಘೋಷಣೆ ಮಾಡಿತ್ತು.

68 ಸದಸ್ಯರ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ 2017ರಲ್ಲಿ ಬಿಜೆಪಿ 44 ಮತ್ತು ಕಾಂಗ್ರೆಸ್ 21 ಸ್ಥಾನಗಳಲ್ಲಿ ಗೆದ್ದಿದ್ದವು.



Join Whatsapp