‘ಮತೀಯ, ಕೋಮುವಾದಿ ಪಕ್ಷ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಗೆ ಹೋಗಿರುವುದು ಆಶ್ಚರ್ಯ’: ಬಿಜೆಪಿ ಸಂಸದ ವಾಗ್ದಾಳಿ

Prasthutha|

ಚಿಕ್ಕಬಳ್ಳಾಪುರ: ಬಿಜೆಪಿ ಒಂದು ಮತೀಯ ಪಕ್ಷ, ಕೋಮುವಾದಿ ಪಕ್ಷ ಎಂದು ಬಿಜೆಪಿ ಸಂಸದ ಬಚ್ಚೇಗೌಡ ಸ್ವ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

- Advertisement -

ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಮೊನ್ನೆಯಷ್ಟೇ ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸಿದ್ದರು. ಇಂದು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಮಾತಾಡಿದ ಅವರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಜೆಡಿಎಸ್ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಜಾತ್ಯಾತೀತ ಅಂತ ಹೆಸರಿಟ್ಟುಕೊಂಡು ಒಂದು ಕೋಮುವಾದಿ ಪಕ್ಷದ ಜೊತೆ ಸ್ನೇಹ ಬೆಳೆಸಲು ಹೊರಟಿದ್ದಾರೆ, ಇದು ತಮ್ಮಲ್ಲಿ ಆಶ್ಚರ್ಯ ಹುಟ್ಟಿಸಿದೆ ಎಂದು ಬಚ್ಚೇಗೌಡ ಹೇಳಿದರು.

ಸರ್ ನೀವು ಬಿಜೆಪಿ ಸಂಸದರು ಅಲ್ವಾ ಅಂತ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ನಿಜ, ಹಾಗಂತ ಪಕ್ಷ ಮಾಡಿದ್ದನ್ನೆಲ್ಲ ಸರಿ ಅಂತ ಹೇಳಲಾಗಲ್ಲ. ನನಗೂ ಸಾಕಷ್ಟು ಅನುಭವವಾಗಿದೆ, ಕೆಲವು ಸಲ ಸುಮ್ಮನಿರಬೇಕಾಗುತ್ತದೆ ಎಂದು ಹೇಳಿದರು.

Join Whatsapp