ಶ್ರೀಲಂಕಾದಲ್ಲಿ ಬಿಜೆಪಿಗೆ ರಾಜಕೀಯಕ್ಕೆ ಅವಕಾಶವಿಲ್ಲ । ಲಂಕಾ ಚುನಾವಣಾ ಆಯೋಗ

Prasthutha|

ಶ್ರೀಲಂಕಾದಲ್ಲಿ ವಿದೇಶಿ ಪಕ್ಷಗಳಿಗೆ ಯಾವುದೇ ರಾಜಕೀಯ ಚಟುವಟಿಕೆಗೆ ಅವಕಾಶವಿಲ್ಲ ಎಂದು ಅಲ್ಲಿನ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

- Advertisement -

“ಶ್ರೀಲಂಕಾದ ರಾಜಕೀಯ ಪಕ್ಷ, ವಿದೇಶದಲ್ಲಿರುವ ಯಾವುದೇ ಪಕ್ಷ, ಸಂಘಟನೆಗಳೊಂದಿಗೆ ಬಾಹ್ಯ ಸಂಪರ್ಕ ಹೊಂದಲು ಅವಕಾಶವಿದೆ. ಆದರೆ, ನಮ್ಮ ಚುನಾವಣಾ ಕಾನೂನುಗಳು ಸಾಗರೋತ್ತರ ರಾಜಕೀಯ ಪಕ್ಷಗಳಿಗೆ ಇಲ್ಲಿ ಕೆಲಸ ಮಾಡಲು ಅನುಮತಿ ನೀಡುವುದಿಲ್ಲ” ಎಂದು ಶ್ರೀಲಂಕಾದ ಚುನಾವಣಾ ಆಯೋಗದ ಅಧ್ಯಕ್ಷ ನಿಮಲ್ ಪುಂಚಿಹೆವಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದ್ವೀಪ ರಾಷ್ಟ್ರ ಶ್ರೀಲಂಕಾ ಮತ್ತು ನೇಪಾಳದಲ್ಲಿ ಬಿಜೆಪಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಯೋಚಿಸುತ್ತಿದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಸುದ್ದಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

- Advertisement -

ಆತ್ಮನಿರ್ಭರ್ ದಕ್ಷಿಣ ಏಷ್ಯಾದ ಭಾಗವಾಗಿ ಇತರ ದೇಶಗಳಲ್ಲಿ ಬಿಜೆಪಿ ಆಡಳಿತವನ್ನು ಸ್ಥಾಪಿಸುವುದಕ್ಕೆ ಅಮಿತ್ ಶಾ ಯೋಜನೆ ಹೊಂದಿದ್ದಾರೆ ಎಂಬ ಬಿಪ್ಲಬ್ ಅವರ ಹೇಳಿಕೆಗೆ ಅವರು ಸ್ಪಷ್ಟನೆ ನೀಡಿದ್ದಾರೆ.

ದೇಶದ ಚುನಾವಣಾ ಕಾನೂನು ಅಂತಹ ವ್ಯವಸ್ಥೆಯನ್ನು ಅನುಮತಿಸುವುದಿಲ್ಲ. ಬಿಜೆಪಿಗೆ ಶ್ರೀಲಂಕಾದಲ್ಲಿ ರಾಜಕೀಯ ಮಾಡಲು ಅವಕಾಶವಿಲ್ಲ ಎಂದು ನಿಮಲ್ ಹೇಳಿದ್ದಾರೆ.

ಈ ಮೂಲಕ ಶ್ರೀಲಂಕಾದಲ್ಲಿ ಪಕ್ಷ ಕಟ್ಟುವ ಬಿಜೆಪಿ ಕನಸು ಹುಸಿಗೊಂಡಿದೆ.

Join Whatsapp