ನವದೆಹಲಿ: ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಸಮರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯ ಕ್ಷೇತ್ರದಲ್ಲಿ ಬಿಜೆಪಿಯು ಸೋಲುಂಡ ಪರಿಣಾಮ ಬಿಜೆಪಿ ಹೈಕಮಾಂಡ್ ಸೋಲಿನ ವರದಿ ನೀಡುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಅಲ್ಲದೇ ಮುಖ್ಯಮಂತ್ರಿ ಬೊಮ್ಮಾಯಿಗೆ ಪಂಚ ಪ್ರಶ್ನೆಗಳನ್ನೂ ಮುಂದಿಟ್ಟಿದೆ.
ಹೈಕಮಾಂಡ್ ಪಂಚ ಪ್ರಶ್ನೆ !
ಪ್ರಶ್ನೆ 1: ತವರು ಕ್ಷೇತ್ರದಲ್ಲಿಯೇ ಕಮಲ ಅರಳದಿರಲು ಕಾರಣವೇನು?
ಪ್ರಶ್ನೆ 2: ಸಚಿವರುಗಳು ತಂತ್ರವೆಲ್ಲವೂ ವರ್ಕ್ಔಟ್ ಆಗದಿರಲು ಕಾರಣ?
ಪ್ರಶ್ನೆ 3: ಯಾವ ನಂಬಿಕೆಯ ಮೇಲೆ 2023ಚುನಾವಣೆಯನ್ನ ಎದುರಿಸುವುದು?
ಪ್ರಶ್ನೆ 4: ಬೊಮ್ಮಾಯಿ ನೇತೃತ್ವ ಎಂದಿದ್ದೇ ಉಲ್ಟಾ ಹೊಡೆಯಲು ಕಾರಣವೇ?
ಪ್ರಶ್ನೆ 5: ಹಾನಗಲ್ ಕ್ಷೇತ್ರದಲ್ಲಿ ಸೋಲಿಗೆ ಪ್ರಮುಖವಾಗಿ ಕಾರಣವಾಗಿದ್ದು ಏನು?
ಬಿಜೆಪಿ ಹೈಕಮಾಂಡ್ ಚುನಾವಣೆ ವೇಳೆ ಪ್ರಚಾರ ಮಾಡಿದ್ದ ನಾಯಕರಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದು ಸಿಎಂ ತವರು ಜಿಲ್ಲೆಯಲ್ಲಿ ಕಮಲ ಅರಳದಿರಲು ಕಾರಣವೇನು? ಎಂದು ಪ್ರಶ್ನಿಸಿದೆ. ಮುಂಬರುವ ಕರ್ನಾಟಕದ 2023ರ ಚುನಾವಣೆಯನ್ನು ಯಾವ ನಂಬಿಕೆ ಮೇಲೆ ಎದುರಿಸಬೇಕು ಎಂದು ಪ್ರಶ್ನಿಸಿದೆ ಎನ್ನಲಾಗಿದೆ. ಇದಕ್ಕೆಲ್ಲವೂ ಉತ್ತರ ನೀಡಿ ಎಂದು ತಾಕೀತು ಮಾಡಿದೆ.