ದೇಶದಲ್ಲಿ ಬಿಜೆಪಿ ಕುಸಿತ ಕಂಡಿದೆ: ಜೈರಾಮ್ ರಮೇಶ್

Prasthutha|

ರಾಂಚಿ: ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಪೂರ್ಣವಾಗಿ ಅಧಃಪತನ ಕಂಡಿದೆ. ಉಳಿದ ಭಾಗಗಳಲ್ಲಿ ಅರ್ಧಕ್ಕೆ ಕುಸಿದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿರ್ಗಮಿಸಲಿರುವ ಪ್ರಧಾನಿ ಎಂದು ಉಲ್ಲೇಖಿಸಿದರು. ಲೋಕಸಭಾ ಚುನಾವಣೆಯ ಭಾಗವಾಗಿ ವಿವಿಧ ಹಂತಗಳಲ್ಲಿ ನಡೆಯುತ್ತಿರುವ ಮತದಾನದಲ್ಲಿ ಬಿಜೆಪಿಗೆ ಹತಾಶೆ ಉಂಟಾಗಿದೆ ಎಂದು ತಿಳಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ– ಮುಸ್ಲಿಂಮರ ನಡುವೆ ರಾಜಕೀಯ ಮಾಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಇದೀಗ ಮೋದಿ ಗ್ಯಾರಂಟಿ ಕುಸಿದಿದೆ. ‘ವಿಕಸಿತ್ ಭಾರತ್’ ಕುರಿತು ಯಾವುದೇ ಚರ್ಚಯೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.



Join Whatsapp