ಬೆಂಗಳೂರು: ಹಿಮಾಚಲ ಪ್ರದೇಶದ ಚುನಾವಣೆ ದಿನಾಂಕ ಪ್ರಕಟಿಸಿರುವ ಚುನಾವಣಾ ಆಯೋಗ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಿಲ್ಲ. ಆಯೋಗದ ಈ ನಡೆ ಅನುಮಾನಾಸ್ಪದ. ವೇಳಾಪಟ್ಟಿ ಪ್ರಕಟಿಸಿದರ ಹಿಂದೆ BJPಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ED,CBI ಮತ್ತು ITಯಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಕುಲಗೆಡಿಸಿರುವ BJP, ಈಗ ಚುನಾವಣಾ ಆಯೋಗವನ್ನು ಕುಲಗೆಡಿಸಿದೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಕ್ತ-ನಿರ್ಭೀತ-ನ್ಯಾಯಸಮ್ಮತ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. ಸಂವಿಧಾನದ 324ನೇ ವಿಧಿಯ ಅನ್ವಯ ಕಾರ್ಯನಿರ್ವಹಿಸುವ ಆಯೋಗ ಪಕ್ಷಪಾತದಿಂದ ವರ್ತಿಸಬಾರದು. ಆದರೆ ಈಗಿನ ಚುನಾವಣಾ ಆಯೋಗ BJP ಪಕ್ಷದ ಅನಧಿಕೃತ ವಕ್ತಾರನಂತೆ ಕಾರ್ಯನಿರ್ವಹಿಸುತ್ತಿದೆ. ಸಾಂವಿಧಾನಿಕ ಸಂಸ್ಥೆಗಳು ಜನರ ವಿಶ್ವಾಸಾರ್ಹತೆ ಕಳೆದುಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.