ಪಣಜಿ: ಬಿಜೆಪಿಯು ರಾಜಕೀಯ ಹೇಳಿಕೆಗಳ ಮೂಲಕ ಜನರನ್ನು ಮೂರ್ಖರನ್ನಾಗಿಸಿದೆ ಎಂದು ಗೋವಾದ ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯ ಸೋಲು ಗೋವಾದಲ್ಲಿ ಬಿಜೆಪಿಯನ್ನು ಜಾಗೃತಗೊಳಿಸಿದ್ದು, ಕರ್ನಾಟಕದ ಕಳಸಾ ಭಂಡೂರಿ ಯೋಜನೆಗೆ ಕೇಂದ್ರದಿಂದ ಅನುಮೋದನೆ ಪಡೆದಿರುವ ಡಿಪಿಆರ್ ಅಕ್ರಮ ಎಂದು ಅರಿವಾಗಿದೆ. ಗೋವಾ ಬಿಜೆಪಿಯವರು ಮೊಸಳೆ ಕಣ್ಣೀರು ಹಾಕುವುದನ್ನು ನಿಲ್ಲಿಸಬೇಕು ಮತ್ತು ಕಳಸಾ ಭಂಡೂರಿಯ ಡಿಪಿಆರ್ ಹಿಂಪಡೆಯಲು ಕೇಂದ್ರದ ಬಿಜೆಪಿ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು- ಗೋವಾದ ಬಿಜೆಪಿ ಗಂಭೀರವಾಗಿದ್ದರೆ, ಕಳಸಾ ಭಂಡೂರಿ ಯೋಜನೆಯ ಡಿಪಿಆರ್ ನ ಅನುಮೋದನೆಯನ್ನು ಹಿಂಪಡೆದು ಯಥಾಸ್ಥಿತಿ ಕಾಯ್ದುಕೊಳ್ಳಲು ದೆಹಲಿಯಲ್ಲಿ ಮೊದಲು ಟ್ರಬಲ್ ಇಂಜಿನ್ ಮೇಲೆ ಒತ್ತಡ ಹೇರಬೇಕು.
ರಾಜಕೀಯ ಹೇಳಿಕೆಗಳ ಮೂಲಕ ಬಿಜೆಪಿ ಜನರನ್ನು ಮೂರ್ಖರನ್ನಾಗಿಸಿದೆ. ಬಿಜೆಪಿ ಕಾರ್ಯಕಾರಿ ಸಮಿತಿಯ ನಿರ್ಧಾರವು ಸಂಪೂರ್ಣವಾಗಿ ರಾಜಕೀಯವಾಗಿದೆ ಮತ್ತು ಸಮಗ್ರತೆಯ ಕೊರತೆಯಿದೆ ಎಂದು ಅಲೆಮಾವ್ ಹೇಳಿದರು.