ಚುನಾವಣೆಗೂ ಮುನ್ನ ವಿದ್ಯುತ್ ದರ ಕಡಿತಕ್ಕೆ ಬಿಜೆಪಿ ಸರ್ಕಾರ ಚಿಂತನೆ

Prasthutha|

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾರರ ಓಲೈಸಲು ಮುಂದಾಗಿರುವ ಬಿಜೆಪಿ, ವಿದ್ಯುತ್ ದರವನ್ನು ಹೆಚ್ಚಿಸುವ ವಿದ್ಯುತ್ ಸರಬರಾಜು ನಿಗಮಗಳ (ಎಸ್ಕಾಂ) ಬೇಡಿಕೆಯ ಹೊರತಾಗಿಯೂ ವಿದ್ಯುತ್ ದರ ಕಡಿತಗೊಳಿಸಲು ಮುಂದಾಗಿದೆ.

- Advertisement -

ಪ್ರತಿ ಯುನಿಟ್’ಗೆ 70 ಪೈಸೆಯಿಂದ ರೂ.2.10ವರೆಗೂ ಇಳಿಕೆ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್’ಸಿ)ಕ್ಕೆ ಸೂಚನೆ ನೀಡಲು ಬಿಜೆಪಿ ಮುಂದಾಗಿದೆ.

ಇಂಧನ ಸಚಿವ ವಿ.ಸುನೀಲ್ ಕುಮಾರ್  ಮಾತನಾಡಿ, ಈ ಸಂಬಂಧ ಪ್ರಸ್ತಾವನೆಯನ್ನು ಕೆಇಆರ್’ಸಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

- Advertisement -

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಿರುವುದರಿಂದ ಕರ್ನಾಟಕದಲ್ಲಿ ವಿದ್ಯುತ್ ದರ ಕಡಿಮೆ ಮಾಡಲಾಗುತ್ತಿದೆ. ಗ್ರಾಹಕರಿಗೆ ಶುಲ್ಕ ವಿಧಿಸುವ ವಿವಿಧ ಸ್ಲ್ಯಾಬ್’ಗಳ ಪರಿಷ್ಕರಣೆಯನ್ನೂ ಪ್ರಸ್ತಾವನೆ ಒಳಗೊಂಡಿದೆ. ಬಿಲ್ಲಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈಗಿರುವ ಆರರಿಂದ ಏಳು ಸ್ಲ್ಯಾಬ್ಗಳನ್ನು ಮೂರಕ್ಕೆ ಇಳಿಸುವ ಆಲೋಚನೆ ಇದೆ ಎಂದು ತಿಳಿಸಿದ್ದಾರೆ.



Join Whatsapp