ಒಂದೇ ವರ್ಷದಲ್ಲಿ ಬಿಜೆಪಿ ಪಡೆದ ದೇಣಿಗೆ720 ಕೋಟಿ ರೂ.!

Prasthutha|

ನವದೆಹಲಿ: ಒಂದೇ ವರ್ಷದಲ್ಲಿ ಬಿಜೆಪಿ ರೂ.720 ಕೋಟಿ ದೇಣಿಗೆ ಪಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬಿಜೆಪಿ ಸಲ್ಲಿಸಿದ 2022-23ರ ಹಣಕಾಸು ವರ್ಷದ ದೇಣಿಗೆ ವರದಿಯನ್ನು ಬಿಜೆಪಿ ಈ ವರ್ಷದ ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗಕ್ಕೆ ಬಿಜೆಪಿ ವರದಿ ಸಲ್ಲಿಸಿದೆ. ಅದನ್ನು ಚುನಾವಣಾ ಸಮಿತಿಯು ಸಾರ್ವಜನಿಕವಾಗಿ ಪ್ರಕಟಿಸಿದೆ. ತನ್ನ ಘಟಕಗಳು, ಚುನಾವಣಾ ಟ್ರಸ್‌ಗಳು, ವ್ಯಕ್ತಿಗಳು ಮತ್ತು ಶಾಸಕರಿಂದ ಸುಮಾರು 720 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ವೀಕರಿಸಿದೆ ಎಂದು ಬಿಜೆಪಿ ತಿಳಿಸಿದೆ.

- Advertisement -

ಭಾರ್ತಿ ಎಂಟರ್ಪ್ರೈಸಸ್ ಬೆಂಬಲಿತ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ 254.75 ಕೋಟಿ ರೂ. ದೇಣಿಗೆ ನೀಡಿದೆ. ಟ್ರಸ್ಟ್‌ನ ಕೊಡುಗೆಗಳನ್ನು ಬಹು ಕಂತುಗಳಲ್ಲಿ ನೀಡಲಾಗಿದೆ ಎಂದು ವರದಿ ಹೇಳಿದೆ. ಒಂದು ಹಣಕಾಸು ವರ್ಷದಲ್ಲಿ 20,000 ರೂ.ಗಿಂತ ಹೆಚ್ಚಿನ ದೇಣಿಗೆ ನೀಡಿದ ದಾನಿಗಳ ವಿವರಗಳನ್ನು ರಾಜಕೀಯ ಪಕ್ಷಗಳು ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.



Join Whatsapp