ಇಂದೋರ್: ಬಿಜೆಪಿ ಪಕ್ಷದ ಕಚೇರಿಯ ಸೆಕ್ಯೂರಿಟಿಗೆ ಅಗ್ನಿವೀರರಿಗೇ ಮೊದಲ ಆದ್ಯತೆ ಕೊಡುವುದಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯ ಅವರು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ನೂತನ ಸೇನಾ ನೇಮಕಾತಿ ‘ಅಗ್ನಿಪಥ’ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ವಿಜಯವರ್ಗೀಯ ಅವರು ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಬಿಜೆಪಿ ಪಕ್ಷದ ಕಚೇರಿಯಲ್ಲಿ ಭದ್ರತೆಗೆ ವೃತ್ತಿಪರರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಅಗ್ನಿವೀರರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಅಗ್ನಿಪಥ ಯೋಜನೆಯಲ್ಲಿ ಯುವಕರು ಶಿಸ್ತು ಮತ್ತು ವಿಧೇಯತೆಯಂತಹ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬಹುದು. ಇದರಿಂದ ಸೇವೆಯ ಅವಧಿ ಪೂರ್ಣಗೊಂಡು ಅಗ್ನಿವೀರರಾಗಿ ಹೊರಬಂದ ನಂತರ ಭವಿಷ್ಯದ ದೃಷ್ಟಿಯಲ್ಲಿ ಯುವಕರಿಗೆ ಲಾಭವಾಗುತ್ತದೆ’ ಎಂದು ವಿಜಯವರ್ಗೀಯ ತಿಳಿಸಿದ್ದಾರೆ.