ಬಿಜೆಪಿ – ಡ್ರಗ್ ಪೆಡ್ಲರ್ ಸಂಬಂಧ: ನವಾಬ್ ಮಲಿಕ್ ಮತ್ತೊಂದು ಮಹತ್ವದ ಟ್ವೀಟ್

Prasthutha|

ಮುಂಬೈ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರ ಸವಾಲು ಸ್ವೀಕರಿಸಿರುವ ಎನ್ ಸಿಪಿ- ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಂತ್ರಿ ನವಾಬ್ ಮಲಿಕ್ ಅವರು ಫಡ್ನವೀಸ್ ರ ಪತ್ನಿ ಅಮೃತಾ ಅವರು ಮಾದಕ ದ್ರವ್ಯ ಕಳ್ಳ ಸಾಗಣೆದಾರ ಜಯದೀಪ್ ರಾಣಾ ಜೊತೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದರ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ ಎಂದು ಹೇಳಿದ್ದಾರೆ.

- Advertisement -


ಇದಕ್ಕೆ ಪ್ರತಿಯಾಗಿ ಫಢ್ನವೀಸ್ ಅವರು ನವಾಬ್ ಮಲಿಕ್ ಗೆ ಅಂಡರ್ ವರ್ಲ್ಡ್ ಸಂಪರ್ಕವಿದೆ ಎಂದು ದೂರಿದ್ದಾರೆ.
“ನಾನು ಒಂದು ಫೋಟೋ ಬಿಡುಗಡೆ ಮಾಡುತ್ತಿದ್ದೇನೆ. ಈತ ಜೈದೀಪ್ ರಾಣಾ, ಸದ್ಯ ದೆಹಲಿಯ ಸಬರಮತಿ ಜೈಲಿನಲ್ಲಿ ಇದ್ದಾನೆ. ಆತನನ್ನು ಮಾದಕ ದ್ರವ್ಯ ಕಳ್ಳ ಸಾಗಣೆಗಾಗಿ ಬಂಧಿಸಲಾಗಿದೆ. ಅಮೃತ ಫಡ್ನವೀಸ್ ಬಿಡುಗಡೆ ಮಾಡಿದ ರಿವರ್ ಆಂತೆಮ್ ಹಾಡಿಗೆ ವೆಚ್ಚ ಮಾಡಿದವನು ಈ ರಾಣಾ. ಅದರಲ್ಲಿ ದೇವೇಂದ್ರ ಫಡ್ನವೀಸರನ್ನೂ ತೋರಿಸಲಾಗಿದೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಇಲ್ಲೆಲ್ಲ ಮಾದಕ ದ್ರವ್ಯ ವ್ಯವಹಾರವು ಹೆಚ್ಚಾಯಿತು” ಎಂದು ಮಲಿಕ್ ಹೇಳಿದ್ದಾರೆ.
ರಿವರ್ ಆಂತೆಮ್ ಹಾಡಿನ ಒಂದು ತುಣುಕನ್ನು ಸಹ ಮಾಲಿಕ್ ಟ್ವೀಟ್ ಮಾಡಿದ್ದು, ಅದರಲ್ಲಿ ಇದೆಲ್ಲದರ ಹಣಕಾಸು ಮುಖ್ಯಸ್ಥ ಜೈದೀಪ್ ರಾಣಾ ಎಂದು ಪರಿಚಯಿಸಲ್ಪಡುವ ಸಂಗತಿಯೂ ಇದೆ. ಇದನ್ನು ಹಿಂದೆಯೇ ಆರೋಪ ಮಾಡಿದಾಗ ಸಾಕಷ್ಟು ಕಡೆ ತೆಗೆದು ಹಾಕಿದ್ದಾರೆ.
“ಅವರು ಗಾಜಿನ ಮನೆಯಲ್ಲಿ ಇದ್ದಾರೆ, ಮಲಿಕ್ ರ ಭೂಗತ ಜಗತ್ತಿನ ನಂಟಿನ ಬಗ್ಗೆ ನಾನು ಶರದ್ ಪವಾರ್ ರಿಗೆ ವಿವರಿಸಿ ಹೇಳದೆ ಬಿಡುವುದಿಲ್ಲ” ಎಂದು ಫಡ್ನವೀಸ್ ಹೇಳಿದ್ದಾರೆ.

Join Whatsapp