ಸ್ಮಶಾನಕ್ಕೆ ಹೋಗಲು ದಾರಿ ತೋರಿಸುವ ಫ್ಲೆಕ್ಸ್ ನಲ್ಲೂ ಬಿಜೆಪಿಯಿಂದ ಮೋದಿಯ ಫೋಟೋ ಜಾಹೀರಾತು!

Prasthutha|

►ಬಿಜೆಪಿಯ ‘ಸ್ಮಶಾನ ರಾಜಕೀಯ’ಕ್ಕೆ ವ್ಯಾಪಕ ಆಕ್ರೋಶ!

- Advertisement -

ಕೋವಿಡ್ ಸೋಂಕಿನಿಂದ ಇಡೀ ರಾಜ್ಯವೇ ತತ್ತರಿಸಿ ಹೋಗಿದ್ದು, ಸರಕಾರದ ನಿರ್ಲಕ್ಷ್ಯದಿಂದ ಆಕ್ಸಿಜನ್ ಸಮಸ್ಯೆಯುಂಟಾಗಿ ಅಪಾರ ಸಾವು ನೋವುಗಳು ಸಂಭವಿಸುತ್ತಿದೆ. ಈ ನಡುವೆ ಬೆಂಗಳೂರಿನ ಗಿಡ್ಡೇನಹಳ್ಳಿಯಲ್ಲಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಹೋಗಲು ದಾರಿ ತೋರಿಸುವ ಫ್ಲೆಕ್ಸ್ ನಲ್ಲಿ ಮೋದಿ ಮತ್ತು ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಫೋಟೋ ಹಾಕಿ ರಾಜಕೀಯ ಮಾಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇದೀಗ ಕೇವಲ ಪ್ರಚಾರಕ್ಕಾಗಿ ಇಂತಹಾ ಕೀಳುಮಟ್ಟದ ರಾಜಕೀಯ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ಗಿಡ್ಡೇನಹಳ್ಳಿ ಸ್ಮಶಾನಕ್ಕೆ ರಾಶಿ ರಾಶಿ ಹೆಣಗಳು ಬರುತ್ತಿದ್ದು, ಸಾವಿನ ಬೆಲೆ ಗೊತ್ತಿಲ್ಲದ ಈ ಸರ್ಕಾರ ಸೋಂಕಿತರ ಹೆಣಗಳೊಂದಿಗೆ ಚೆಲ್ಲಾಟವಾಡುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Join Whatsapp