ನವದೆಹಲಿ: ಪಕ್ಷದ ಮಾಜಿ ವಕ್ತಾರೆಯ ಪ್ರವಾದಿ ವಿರುದ್ಧ ನಿಂದನೆಯು ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದು, ತೀವ್ರ ಪ್ರತಿಭಟನೆ ನಡೆಯುತ್ತಿರುವ ನಡುವೆ ದೆಹಲಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ಮುಖ್ಯ ವೇದಿಕೆಯಲ್ಲಿ ಕೇಸರಿಯ ಬದಲಿಗೆ ನೀಲಿ-ಬಿಳಿ ಬಣ್ಣದ ಮೊರೆಹೋಗಿದೆ.
ಸದಾ ಧ್ರುವೀಕರಣದ ಲಾಭವನ್ನು ಪಡೆಯುತ್ತಿದ್ದ ಬಿಜೆಪಿ, ಪ್ರವಾದಿ ವಿರುದ್ಧದ ಹೇಳಿಕೆಯನ್ನು ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಮತ್ತು ಜಾಗತಿಕವಾಗಿ ಭಾರತದ ವಿರುದ್ಧ ಅಕ್ರೋಶ ವ್ಯಕ್ತವಾಗುತ್ತಿರುವಾಗ ಬಿಜೆಪಿಯ ಸಭೆಯ ಕಾರ್ಯಕ್ರಮದಲ್ಲಿ ಕೇಸರಿ ಬದಲು ನೀಲಿ-ಬಿಳಿ ಬಣ್ಣಕ್ಕೆ ಮೊರೆಹೋಗಿ ಸಮಸ್ಯೆಗೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.
ಗುಜರಾತಿನಿಂದ ಕಾರ್ಯಕ್ರಮದಲ್ಲಿ ವಿನ್ಯಾಸಗೊಳಿಸಿದ ಟೋಪಿ ಧರಿಸಿರುವುದು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ 8 ವರ್ಷಗಳ ಪೋಸ್ಟರ್’ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪೋಸ್ಟರ್’ಗಳು ಕೇಸರಿ ಬದಲಿಗೆ ನೀಲಿ ಬಣ್ಣಕ್ಕೆ ಬಿಜೆಪಿ ಪಕ್ಷಕ್ಕೆ ಬದಲಾಯಿಸಿದೆ.
ಪ್ರವಾದಿ ಮುಹಮ್ಮದ್ ವಿರುದ್ಧದ ಮಾಜಿ ವಕ್ತಾರೆಯ ಹೇಳಿಕೆಯು ದೇಶಾದ್ಯಂತ ತೀವ್ರ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಕೇಸರಿ ಬಣ್ಣವನ್ನು ದೂರವಿಡಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿವೆ.