ಕನೌಜ್: ಬಿಜೆಪಿ ಯಾರಿಂದಲೂ ‘ದೇಣಿಗೆ’ ಪಡೆದಿಲ್ಲ, ಬದಲಾಗಿ ‘ಸುಲಿಗೆ’ ಮಾಡಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ‘ದೇಣಿಗೆ ಪಡೆಯುವ ಬದಲು ಸುಲಿಗೆ ಮಾಡುವುದಕ್ಕಾಗಿ ಬಿಜೆಪಿಯು, ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ (ಐಟಿ) ಇಲಾಖೆ ಮತ್ತು ಇತರ ಸಂಸ್ಥೆಗಳನ್ನು ಹೇಗೆ ಬಳಸಿಕೊಂಡಿದೆ ಎಂಬುದು ಜನರಿಗೆ ಗೊತ್ತಿದೆ’ ಎಂದು ಹೇಳಿದ್ದಾರೆ.
‘ಈ ಇಲಾಖೆಗಳ ಮೂಲಕ ನೋಟಿಸ್ ಜಾರಿಗೊಳಿಸಿ ಒತ್ತಡ ಹೇರಿದಾಗೆಲ್ಲ ಬಿಜೆಪಿ ಖಾತೆಗೆ ಹಣ ಜಮೆಯಾಗಿರುವುದು ಬಹಿರಂಗಗೊಂಡಿದೆ. ಅಧಿಕಾರದಲ್ಲಿ ಇರುವವರು ದೇಣಿಗೆ ಪಡೆದಿಲ್ಲ. ಬದಲಾಗಿ ಸುಲಿಗೆ ಮಾಡಿದ್ದಾರೆ’ ಎಂದು ಒತ್ತಿ ಹೇಳಿದ್ದಾರೆ.