ಶೇ.23ರಷ್ಟು ಸಂಸದರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ

Prasthutha|

ಮೋದಿ ಬಲದಲ್ಲೇ ಗೆದ್ದವರನ್ನು ದೂರ ಇಟ್ಟ ಬಿಜೆಪಿ

- Advertisement -

ಬೆಂಗಳೂರು: ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಇನ್ನೂ 267 ಕ್ಷೇತ್ರಗಳಿಗಷ್ಟೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇಲ್ಲಿವರೆಗೆ 63 ಸಂಸದರು ಕ್ಷೇತ್ರವನ್ನು ಕಳೆದುಕೊಂಡಿದ್ದರೆ, ಮುಂದೆ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದೆ. ಬಿಜೆಪಿ ಕೇವಲ ತನ್ನ ಸಂಸದರಿಗೆ ಟಿಕೆಟ್​ ನಿರಾಕರಿಸುತ್ತಿಲ್ಲ ಜೊತೆಗೆ ಕ್ಷೇತ್ರವನ್ನು ಬದಲಾಯಿಸಿದೆ. ಹಲವು ಘಟಾನುಘಟಿ ನಾಯಕರು ತಮ್ಮ ಕ್ಷೇತ್ರದ ಬದಲು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಬಹುತೇಕ ಕಡೆ ಇದೇ ಪರಿಸ್ಥಿತಿ

- Advertisement -

ಸರಳವಾಗಿ ಅರ್ಥ ಮಾಡಿಕೊಳ್ಳುವುದಾದರೆ ಕರ್ನಾಟಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಗೆ ಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಟಿಕೆಟ್​ ನೀಡಲಾಗಿದೆ. ಅದು ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲು ಅಗತ್ಯವಾದ ಯಡಿಯೂರಪ್ಪರ ತೀವ್ರ ಹಟದಿಂದಾಗಿ ಮಾತ್ರ. ಇಲ್ಲದಿದ್ದರೆ ಶೋಭಾಗೂ ಟಿಕೆಟ್ ಇರಲಿಲ್ಲ. ಈ ಕ್ಷೇತ್ರದ ಹಾಲಿ ಸಂಸದ ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್​ ನಿರಾಕರಿಸಲಾಗಿದೆ. ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್​ ಸಿಂಹಗೆ ಟಿಕೆಟ್​ ನಿರಾಕರಿಸಿ, ಹೊಸಬರಾದ ಯದುವೀರ್​​ ಅವರನ್ನು ಕಣಕ್ಕಿಳಿಸಿದೆ. ಇದೇ ರೀತಿಯ ಬದಲಾವಣೆಗಳನ್ನು ಬಿಜೆಪಿ ಹಲವು ರಾಜ್ಯಗಳಲ್ಲಿ ಮಾಡಿದೆ.

ಮೋದಿ ಅಲೆಯಲ್ಲಿ ಗೆದ್ದವರಿಗೆ ಟಿಕೆಟ್​ ನಿರಾಕರಣೆ

ಶೇ.23.5ರಷ್ಟು ಹಾಲಿ ಸಂಸದರನ್ನು ಕೈಬಿಡುವ ನಿರ್ಧಾರದ ಹಿಂದೆ ಸ್ಪಷ್ಟ ಸಂದೇಶ ಇದೆ. ಮೋದಿ ಅಲೆಯಲ್ಲಿ ಗೆದ್ದು ಸ್ವಂತ ಪ್ರಾಬಲ್ಯ ಬೆಳೆಸಿಕೊಳ್ಳದ ಸಂಸದರನ್ನು ಬಿಜೆಪಿ ಕೈಬಿಟ್ಟಿದೆ. ಬಹಳಷ್ಟು ಕ್ಷೇತ್ರದಲ್ಲಿ ಮತದಾರರಿಗೆ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ತಕರಾರಿದೆ. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ಉದ್ದೇಶದಿಂದ ತಮ್ಮಿಷ್ಟಕ್ಕೆ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರು ವೋಟ್​ ಹಾಕಿದ್ದಾರೆ. ಜನರ ಈ ನಾಡಿಮಿಡಿತವನ್ನು ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅರ್ಥ ಮಾಡಿಕೊಂಡಿದೆ. ಹಾಗಾಗಿ ಮೋದಿ ಬಲದಲ್ಲೇ ಕಳೆದ ಚುನಾವಣೆಯಲ್ಲಿ ಗೆದ್ದವರನ್ನು ಬಿಜೆಪಿ ದೂರ ಇಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.

Join Whatsapp