1991ರ ಪೂಜಾ ಸ್ಥಳ ಕಾಯ್ದೆ ರದ್ದುಪಡಿಸಲು ರಾಜ್ಯಸಭೆಯಲ್ಲಿ ಆಗ್ರಹಿಸಿದ ಬಿಜೆಪಿ

Prasthutha|

ನವದೆಹಲಿ: 1991ರ ಪೂಜಾ ಸ್ಥಳ ಕಾಯ್ದೆ ಸಂವಿಧಾನದಲ್ಲಿರುವ ಸಮಾನತೆ ಹಾಗೂ ಜಾತ್ಯತೀತ ಹಕ್ಕುಗಳ ಉಲ್ಲಂಘಿಸಿದೆ. ಅದನ್ನು ರದ್ದುಪಡಿಸಬೇಕು ಎಂದು ರಾಜ್ಯ ಸಭಾ ಸಂಸದ ಹರನಾಥ್ ಸಿಂಗ್ ಯಾದವ್ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.

- Advertisement -

ರಾಮಜನ್ಮಭೂಮಿಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ 191ರ ಪೂಜಾ ಸ್ಥಳ ಕಾಯ್ದೆ ಅನ್ವಯವಾಗಲಿದೆ ಅನ್ನೋ ಷರತ್ತು ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರಮುಖವಾಗಿ ಈ ಕಾಯ್ದೆ ಹಿಂದೂ, ಜೈನ, ಬೌದ್ಧ, ಸಿಖ್‌ರ ಹಕ್ಕುಗಳಿಗೆ ವಿರುದ್ಧವಾಗಿದೆ. ಹೀಗಾಗಿ ಈ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಬಿಜೆಪಿ ಸಂಸದ ಹರನಾಥ್ ಸಿಂಗ್ ಆಗ್ರಹಿಸಿದ್ದಾರೆ.

ಪಿವಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪೂಜಾ ಸ್ಥಳ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆ ಪ್ರಕಾರ 1947ರ ಆಗಸ್ಟ್ 15ಕ್ಕಿಂತ ಮುಂಚೆ ಯಾವ ಸ್ವರೂಪದಲ್ಲಿ ಪೂಜಾ ಸ್ಥಳಗಳು (ಮಂದಿರ, ಮಸೀದಿ, ಚಚ್‌ರ್‍, ಗುರುದ್ವಾರ, ಇತ್ಯಾದಿ) ಇದ್ದವೋ ಈಗಲೂ ಅದೇ ಸ್ವರೂಪದಲ್ಲೇ ಅವು ಇರಬೇಕು. ಅವುಗಳ ಸ್ವರೂಪ ಬದಲಾಯಿಸಕೂಡದು ಎಂದು 1991ರ ಪೂಜಾ ಸ್ಥಳ ಕಾಯ್ದೆ ಹೇಳತ್ತದೆ.

- Advertisement -

ಈ ಕಾಯ್ದೆಯನ್ನು ಪ್ರಶ್ನಿಸಿ ಈಗಾಗಲೇ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದು, ಇದೀಗ ಬಿಜೆಪಿ ರಾಜ್ಯಸಭೆಯಲ್ಲಿ ಈ ಕಾಯ್ದೆ ರದ್ದುಪಡಿಸಬೇಕು ಎಂಬ ಆಗ್ರಹವನ್ನು ಇಟ್ಟಿದೆ.




Join Whatsapp