ತಮಿಳುನಾಡು: ಬಿಜೆಪಿ ಅಭ್ಯರ್ಥಿಗೆ ಒಂದೇ ಒಂದು ಮತ !

Prasthutha|

ಈರೋಡ್: ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಡಿಎಂಕೆ ಬಹುತೇಕ ಕಡೆ ಭಾರಿ ಮುನ್ನಡೆ ಸಾಧಿಸಿದೆ.
ಈ ನಡುವೆ ತಮಿಳುನಾಡಿನಲ್ಲಿ ಬಿಜೆಪಿಯ ದಯನೀಯ ಸ್ಥಿತಿ ಈ ಚುನಾವಣೆಯಲ್ಲೂ ಮುಂದುವರಿದಿದೆ. ಈರೋಡ್’ನ ಭವಾನಿನಗರದ 11 ನೇ ವಾರ್ಡ್’ನಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನರೇಂದ್ರನ್ ಎಂಬುವವರು ಕೇವಲ ಒಂದು ಮತ ಪಡೆಯುವ ಮೂಲಕ ಹೀನಾಯವಾಗಿ ಸೋಲು ಕಂಡಿದ್ದಾರೆ.
ವಿಶೇಷವೆಂದರೆ ನರೇಂದ್ರನ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದ ಸ್ವ ಪಕ್ಷ ಬಿಜಪಿಯವರೂ ಕೂಡ ನರೇಂದ್ರನ್’ಗೆ ಮತ ನೀಡಿಲ್ಲ. ಜೊತೆಗೆ ಸ್ನೇಹಿತರು ಹಾಗೂ ಸ್ವತಃ ಮನೆಯವರೂ ಕೂಡ ಚುನಾವಣೆಯಲ್ಲಿ ನರೇಂದ್ರನ್’ಗೆ ಕೈ ಕೊಟ್ಟಿದ್ದಾರೆ.

- Advertisement -


ಈರೋಡ್’ನ ಭವಾನಿನಗರದ 11 ನೇ ವಾರ್ಡ್’ನಲ್ಲಿ ಒಟ್ಟು 162 ಮತಗಳು ಚಲಾವಣೆಯಾಗಿದ್ದವು.‌ ಇದರಲ್ಲಿ ಡಿಎಂಕೆ ಅಭ್ಯರ್ಥಿ 84 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಭಾರಿಸಿದ್ದಾರೆ.
21 ಕಾರ್ಪೋರೇಷನ್’ಗಳ 12, 500 ವಾರ್ಡ್’, 138 ಮುನಿಸಿಪಾಲಿಟಿ ಹಾಗೂ 489 ನಗರ ಪಂಚಾಯತ್’ಗಳಿಗೆ ಫೆಬ್ರವರಿ 19 ರಂದು ಮತದಾನ ನಡೆದಿತ್ತು.
ತಮಿಳುನಾಡಿನಲ್ಲಿ ಈ ಹಿಂದಿನ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಒಂದೇ ಮತ ಪಡೆಯುವ ಮೂಲಕ ಸುದ್ದಿಯಾಗಿದ್ದರು



Join Whatsapp