ಭಾರತ್ ಜೋಡೋ ಗೆ ಕೈಜೋಡಿಸಿದ RBI ಮಾಜಿ ಗವರ್ನರ್ ರಘುರಾಮ್ ರಾಜನ್ ವಿರುದ್ಧ  ಬಿಜೆಪಿ ವಾಗ್ದಾಳಿ

Prasthutha|

ನವದೆಹಲಿ: ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್  ಅವರು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಕೈಜೋಡಿಸಿದ್ದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

RBI ಮಾಜಿ ಗವರ್ನರ್ ಪಕ್ಷಪಾತದ ವ್ಯಕ್ತಿ ಹಾಗೂ ಅವಕಾಶವಾದಿ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ಸಂಸದ ಅನಿಲ್ ಬಲೂನಿ, ರಘುರಾಮ್ ರಾಜನ್ ಅವರು ತಟಸ್ಥ ನಿಲುವಿನವರಲ್ಲ ಎನ್ನುವುದನ್ನು ನಾವು ನಿರಂತರವಾಗಿ ಹೇಳುತ್ತಾ ಬಂದಿದ್ದೆವು. ಕಾಂಗ್ರೆಸ್ ಪಕ್ಷದ  ಗಾಂಧಿಗಳ ನಿಯಂತ್ರಣದಲ್ಲಿ ದೇಶದ ಹಣಕಾಸು ಸಚಿವರಾಗುವುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಇದೀಗ ನಮಗೆ ಕಾಣುತ್ತಿರುವುದು ತಮ್ಮನ್ನು ಆರ್ ಬಿಐ ಗವರ್ನರ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನೊಂದಿಗಿರುವ ಋಣವನ್ನು ರಘುರಾಮ್ ತೀರಿಸುತ್ತಿರುವುದರ ಪ್ರತಿಬಿಂಬವಾಗಿದೆ  ಎಂದು ಟೀಕಿಸಿದರು.

- Advertisement -

ಕೋವಿಡ್ ಸಾಂಕ್ರಾಮಿಕದಂತಹ  ಸಂಕಷ್ಟ ಮತ್ತು ಭೌಗೋಳಿಕ ರಾಜಕೀಯ ಅಡೆತಡೆಗಳ ಆಘಾತದ ಹೊರತಾಗಿಯೂ ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದ ಮೋದಿ ಸರ್ಕಾರದ ಸಾಧನೆಯನ್ನು ರಾಜನ್  ನಿರ್ಲಕ್ಷಿಸಿದ್ದಾರೆ. ಯುಪಿಎ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ಮನೋಭಾವವನ್ನು ಅವರು ಮರೆಮಾಚಲು ಪ್ರಯತ್ನಿಸಿದ್ದಾರೆ. ಇದರಿಂದ ಅವರು ಎಲ್ಲಿಂದ ಬಂದಿದ್ದಾರೆ  ಎಂಬುದು ಈಗ ಸ್ಪಷ್ಟವಾಗಿದೆ ಎಂದು ಬಲೂನಿ ಕಿಡಿಕಾರಿದ್ದಾರೆ.

Join Whatsapp