ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಪಾಟೀಲ್ ಪಕ್ಷ ತೊರೆದಿದ್ದು, ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ.
ವಿಧಾನಸಭೆ ಉಪಚುನಾವಣೆಗೆ ಮುನ್ನವೇ ಬಿಜೆಪಿ ತೊರೆದ ಭಾಸ್ಕರ್ ರಾವ್, ಪಕ್ಷದ ನಾಯಕತ್ವವು ತಮ್ಮ ಅಹವಾಲುಗಳನ್ನು ಆಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಡಿಗ್ ಲೋರ್ ಕ್ಷೇತ್ರದ ಉಪಚುನಾವಣೆ ಅಕ್ಟೋಬರ್ 30 ರಂದು ನಡೆಯಲಿದೆ. ಚುನಾವಣೆಯಲ್ಲಿ ಅಭ್ಯರ್ಥಿಯ ಘೋಷಣೆಯಲ್ಲಿ ತಮ್ಮ ಅಭಿಪ್ರಾಯವನ್ನು ಪರಿಗಣಿಸಲಿಲ್ಲ ಎಂಬುದು ಬಾಸ್ಕರ್ ರಾವ್ ಆರೋಪ.
2014 ರ ಲೋಕಸಭಾ ಚುನಾವಣೆಗೂ ಮುನ್ನ ರಾವ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಮಾಜಿ ಬಿಜೆಪಿ ಶಾಸಕ ಓಂಪ್ರಕಾಶ್ ಪೋಕರ್ಣ ಸೇರಿದಂತೆ ಬಿಜೆಪಿ ನಾಯಕರು ರಾವ್ ಜೊತೆಗೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.