ಬಾಂಬ್ ತಯಾರಿಕೆ ವೇಳೆ ಸ್ಫೋಟಗೊಂಡು ಛಿದ್ರಗೊಂಡಿದ್ದ RSS ಕಾರ್ಯಕರ್ತನ ಕೈಯ್ಯನ್ನು ಕತ್ತರಿಸಿ ತೆಗೆದ ವೈದ್ಯರು

Prasthutha|

- Advertisement -

ವಡಗರ: ಕೇರಳದ ವಡಗರದ ಮಣಿಯೂರ್ ಎಂಬಲ್ಲಿ ಮನೆಯ ಟೆರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟಗೊಂಡು ಛಿದ್ರಗೊಂಡಿದ್ದ RSS ಕಾರ್ಯಕರ್ತನ ಬಲ ಕೈಯನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ.

ಎಡಗೈಯ ಮೂರು ಬೆರಳುಗಳೂ ಕೂಡ ಸ್ಫೋಟದಲ್ಲಿ ಛಿದ್ರಗೊಂಡಿತ್ತು.
ವಡಗರದ ಚೆರಂದತ್ತೂರಿನ ಐಎಚ್ಡಿಪಿ ಕಾಲೋನಿ ನಿವಾಸಿ, ಬಿಜೆಪಿ-ಆರ್ಎಸ್ಎಸ್ ಕಾರ್ಯಕರ್ತನಾದ ಮಣಿಕುಟ್ಟನ್ ಅಲಿಯಾಸ್ ಹರಿಪ್ರಸಾದ್ (28) ಎಂಬಾತ ತನ್ನ ಮನೆಯ ಟೆರೇಸ್ನಲ್ಲಿ ಬಾಂಬ್ ತಯಾರಿಸುವ ವೇಳೆ ಸ್ಫೋಟ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಹರಿಪ್ರಸಾದ್’ನನ್ನು ಕೂಡಲೇ ಪಯ್ಯೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.



Join Whatsapp