ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ಖರ್ಚು ಮಾಡುತ್ತಿರುವ 45 ವರ್ಷದ ವ್ಯಕ್ತಿ!

Prasthutha|

ನ್ಯೂಯಾರ್ಕ್: ಅಮೆರಿಕದ 45 ವರ್ಷ ವ್ಯಕ್ತಿ ತನ್ನ ಯೌವನವನ್ನು ಮರಳಿ ಪಡೆಯಲು ಪ್ರತಿವರ್ಷ 16 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಇದರೊಂದಿಗೆ, ಅವರು ತಮ್ಮ ಮಗನ ಪ್ಲಾಸ್ಮಾ ಸಹ ಬಳಸುತ್ತಿದ್ದಾರೆ. ತನ್ನ ಈ ಕಾರ್ಯಸಾಧನೆಗೆ ವೈದ್ಯರ ತಂಡವನ್ನೇ ಇಟ್ಟುಕೊಂಡಿದ್ದಾರಂತೆ.

- Advertisement -

45 ವರ್ಷದ ಸಾಫ್ಟ್’ವೇರ್ ಡೆವಲಪರ್ ಬ್ರಿಯಾನ್ ಜಾನ್ಸನ್ 18 ವರ್ಷದ ಯುವಕನಂತೆ ಕಾಣಲು ಬಯಸುತ್ತಿದ್ದಾರೆ. ಇದಕ್ಕಾಗಿ ಪ್ಲಾಸ್ಮ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. 45 ವರ್ಷದ ಬ್ರಿಯಾನ್ ಜಾನ್ಸನ್ ತನ್ನ 17 ವರ್ಷದ ಮಗ ಟಾಲ್ಮೆಜ್​ನ ರಕ್ತವನ್ನು ಯೌವನವನ್ನು ಮರಳಿ ಪಡೆಯಲು ಬಳಸಿದ್ದಾರೆ.

ಸಾಮಾನ್ಯವಾಗಿ ಜಾನ್ಸನ್ ಯಾವಾಗಲೂ ಅಪರಿಚಿತ ದಾನಿಯಿಂದ ಪ್ಲಾಸ್ಮಾ ಪಡೆಯುತ್ತಿದ್ದರು. ಆದರೆ ಈ ಬಾರಿ ಅವರ ಮಗ ಟಾಲ್ಮೆಜ್​ನಿಂದ ಒಂದು ಲೀಟರ್ ರಕ್ತವನ್ನು ಪಡೆದಿದ್ದಾರೆ. ಪ್ಲಾಸ್ಮಾ ಮತ್ತು ಪ್ಲೇಟ್ಲೆಟ್​ಗಳ ಬ್ಯಾಚ್ ಅನ್ನು ತಯಾರಿಸಿ ಬ್ರಿಯಾನ್ ಆ ರಕ್ತವನ್ನು ತನ್ನ ದೇಹಕ್ಕೆ ಹರಿಸುತ್ತಾರೆ.

- Advertisement -

ಟಾಲ್ಮೆಜ್​ನ ಪ್ಲಾಸ್ಮಾವನ್ನು ಜಾನ್ಸನ್ ಅವರ ರಕ್ತನಾಳಗಳಿಗೆ ಹರಿಸುವುದರ ಜೊತೆಗೆ, ಜಾನ್ಸನ್ ಅವರ ತಂದೆ 70 ವರ್ಷದ ರಿಚರ್ಡ್ ಅವರಿಗೂ ಪ್ಲಾಸ್ಮಾವನ್ನು ಹರಿಸಲಾಗಿದೆ.

45 ವರ್ಷದ ಸಾಫ್ಟ್ವೇರ್ ಡೆವಲಪರ್ ಬ್ರಿಯಾನ್ ಜಾನ್ಸನ್ ಅಮೆರಿಕದವರಾಗಿದ್ದು, ಬಯೋಟೆಕ್ ಕಂಪನಿಯ ಸಿಇಒ ಕೂಡ ಆಗಿದ್ದಾರೆ. ಬ್ರಿಯಾನ್ ತಾನು 18 ವರ್ಷದ ಯುವಕನಂತೆ ಇರಲು ಬಯಸುತ್ತಾರೆ. ಇದಕ್ಕಾಗಿ ಪ್ರತಿವರ್ಷ 16 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ವರದಿಯ ಪ್ರಕಾರ, 30 ವೈದ್ಯರು ಮತ್ತು ವೈದ್ಯಕೀಯ ತಜ್ಞರ ತಂಡವು ಜಾನ್ಸನ್ ಕಾರ್ಯಸಾಧನೆಗಾಗಿ ಕೆಲಸ ಮಾಡುತ್ತಿದೆ.

Join Whatsapp