ಆಟೋ ರಿಕ್ಷಾದ ಮೇಲೆ ದಾಳಿ ಮಾಡಿದ ಕಾಡೆಮ್ಮೆ !

Prasthutha|

ನವದೆಹಲಿ: ಕಾಡೆಮ್ಮೆಯೊಂದು ಆಟೋ ರಿಕ್ಷಾದ ಮೇಲೆ ದಾಳಿ ಮಾಡಿ ಕಾಡಿನತ್ತ ಹಿಂದಿರುಗಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -


ಆಟೋ ರಿಕ್ಷಾ ತನ್ನ ಪಾಡಿಗೆ ತಾನು ನಿಂತಿದೆ. ಕಾಡೆಮ್ಮೆಯೊಂದು ಆಕ್ರಮಣಕಾರಿ ರೀತಿಯಲ್ಲಿ ಆಟೋರಿಕ್ಷಾಕ್ಕೆ ತೀವ್ರವಾಗಿ ಗುದ್ದಿ ಓಡಿಹೋಗಿದೆ. ದಾಳಿಯಿಂದ ರಿಕ್ಷಾದಲ್ಲಿದ್ದವರಿಗೆ ಯಾವುದೇ ರೀತಿಯಾ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ವೈಲ್ಡ್ ಲೆನ್ಸ್ ಇಕೋ ಎಂಬ ಟ್ವಿಟರ್ ಖಾತೆ ಹಂಚಿಕೊಂಡ ಈ ವೀಡಿಯೋ ಪೋಸ್ಟ್ ನಲ್ಲಿ ಐಎಫ್ ಎಸ್ ಅಧಿಕಾರಿಗಳಾದ ಸುಸಾಂತ ನಂದಾ ಮತ್ತು ಪರ್ವೀನ್ ಕಸ್ವಾನ್ ಅವರನ್ನು ಟ್ಯಾಗ್ ಮಾಡಲಾಗಿದೆ. ಈ ಕಾಡೆಮ್ಮೆಯು ಪೊದೆಗಳತ್ತ ಚಲಿಸಲು ಹೊರಟಿದ್ದು, ಒಂದು ಕ್ಷಣ ನಿಲ್ಲುತ್ತದೆ. ಎದುರಿಗಿದ್ದ ಆಟೋ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡುತ್ತದೆ ಎಂದು ಬರೆಯಲಾಗಿದೆ.

Join Whatsapp