ಮಗನ ಪಂದ್ಯದ ಸಂಭಾವನೆಯನ್ನು ಬಿಸ್ಮಾಳ ಚಿಕಿತ್ಸೆಗೆ ಬಳಸಿ ಎಂದ ಬಾಬರ್ ತಂದೆ

Prasthutha|

ದುಬೈ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ ನನ್ನ ಮಗನಿಗೆ ದೊರೆಯಬೇಕಾದ ಪಂದ್ಯದ ಸಂಭಾವನೆಯನ್ನು ಯುವ ಮಹಿಳಾ ಆಟಗಾರ್ತಿ ಬಿಸ್ಮಾ ಅಮ್ಜದ್ ಅವರ ಚಿಕಿತ್ಸೆಗಾಗಿ ಬಳಸುವಂತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ತಂದೆ ಅಜಂ ಸಿದ್ದಿಕ್ ಅವರು ಪಾಕಿಸ್ತಾನ ಕ್ರಿಕೆಟ್ ಬೋರ್ಡ್, PCBಗೆ ಮನವಿ ಮಾಡಿದ್ದಾರೆ.

- Advertisement -

ಪಾಕಿಸ್ತಾನದ ಮಹಿಳಾ ತಂಡದ ಆಟಗಾರ್ತಿ, 18ವರ್ಷದ ಬಿಸ್ಮಾ ಅಮ್ಜದ್, ಕಳೆದ ತಿಂಗಳು ಕರಾಚಿಯಲ್ಲಿ ನಡೆದ ತರಬೇತಿ ಶಿಬಿರದ ವೇಳೆ ತಲೆಗೆ ಪೆಟ್ಟು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪದೇ ಪದೇ ವಾಂತಿ ಮಾಡುತ್ತಲೇ ಇದ್ದ ಬಿಸ್ಮಾಗೆ ಚಿಕಿತ್ಸೆಯ ವೆಚ್ಚ ನೀಡಲು PCB ಹಿಂದೇಟು ಹಾಕಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕಟೀಖೆ ವ್ಯಕ್ತವಾದ ಬಳಿಕ PCB ತನ್ನ ನಿಲುವು ಬದಲಾಯಿಸಿತ್ತು.

ಇದೀಗ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ತಂದೆ ಅಜಂ ಸಿದ್ದಿಕ್ ಸ್ವತಃ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಅಧ್ಯಕ್ಷ ರಮೀಜ್ ರಾಜಾಗೆ ತನ್ನ ಮಗನ ಪಂದ್ಯದ ಸಂಭಾವನೆಯನ್ನು ಬಿಸ್ಮಾ ಚಿಕಿತ್ಸೆಗೆ ಬಳಸುವಂತೆ ಮನವಿ ಮಾಡಿದ್ದಾರೆ.



Join Whatsapp