ಬೆಂಗಳೂರು: ಪಿಎಂ ಪೋಷಣ್ ಯೋಜನೆಯ ಅಡುಗೆ ಸಿಬ್ಬಂದಿಗೆ ಶನಿವಾರ (ಆ.19) ಶಾಲಾ ಅವಧಿಯ ಬಳಿಕ ಅರ್ಧ ದಿನದ ತರಬೇತಿಯನ್ನು ಆಯೋಜಿಸಲಾಗಿದೆ.
ಜಿಲ್ಲೆಗಳ ಶಿಕ್ಷಣಾಧಿಕಾರಿಗಳು, ತಾಲೂಕುಗಳ ಸಹಾಯಕ ನಿರ್ದೇಶಕರು, ಐವರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ) ಗಳಿಗೆ ಅಡುಗೆ ಕೋಣೆಯ ಸ್ವತ್ಛತೆ, ಸುರಕ್ಷತೆ ಮತ್ತು ಆಹಾರ ಧಾನ್ಯಗಳ ಸಂರಕ್ಷಣೆ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ.
ತರಬೇತಿ ಪಡೆದ ಸಿ.ಆರ್.ಪಿ. ಗಳು ತಮ್ಮ ತಾಲೂಕಿನ ಇತರ ಸಿ.ಆರ್.ಪಿ.ಗಳಿಗೆ ತರಬೇತಿ ನೀಡಬೇಕು. ಬಳಿಕ ಎಲ್ಲ ಸಿ.ಆರ್.ಪಿ.ಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಎಲ್ಲಾ ಮುಖ್ಯ ಅಡುಗೆಯವರು ಮತ್ತು ಆಡುಗೆ ಸಹಾಯಕರಿಗೆ ಶನಿವಾರ ಮಧ್ಯಾಹ್ನದ ಬಳಿಕ ತರಬೇತಿ ಏರ್ಪಾಡು ಮಾಡಬೇಕು ಎಂದು ಪಿಎಂ ಪೋಷಣ್‌ನ ನಿರ್ದೇಶಕರು ಸೂಚನೆ ನೀಡಿದ್ದಾರೆ.