ಥಾಣೆ: ಮುಂಬೈನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ವೆಲ್ಹೋಲಿ, ಶಾಹಪುರ್ (ಥಾಣೆ ಜಿಲ್ಲೆ) ನ 25,000 ಪಕ್ಷಿಗಳನ್ನು ಹಕ್ಕಿ ಜ್ವರದ ಭೀತಿಯ ಹಿನ್ನೆಲೆಯಲ್ಲಿ ಕೊಲ್ಲಲು ಅನುಮತಿ ನೀಡಲಾಗಿದೆ.
ಚಾರಿಟಬಲ್ ಟ್ರಸ್ಟ್ ಒಡೆತನದ ಬಾತುಕೋಳಿಗಳು ಸೇರಿದಂತೆ ಹಲವು ಕೋಳಿ, ಪಕ್ಷಿಗಳು ಸೋಂಕಿಗೆ ಒಳಗಾಗಿದ್ದು, ಒಂದು ವಾರದ ಅವಧಿಯಲ್ಲಿ ಸಾವನ್ನಪ್ಪಿದ್ದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
300 ಕ್ಕೂ ಹೆಚ್ಚು ಪಕ್ಷಿಗಳು “ನಿಗೂಢವಾಗಿ” ಸತ್ತ ನಂತರ, ಸ್ಥಳೀಯ ಪಶುಸಂಗೋಪನೆ ತಜ್ಞರು ಪುಣೆಯ ರಾಜ್ಯ ಪ್ರಯೋಗಾಲಯಕ್ಕೆ ಮತ್ತು ಭೋಪಾಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಲಾಗಿದೆ. ಲ್ಯಾಬ್ ಫಲಿತಾಂಶಗಳು ಹಕ್ಕಿ ಜ್ವರದ H5N1 ತಳಿಯನ್ನು ಪತ್ತೆ ಹಚ್ಚಿವೆ ಎಂದು ತಿಳಿದು ಬಂದಿದೆ. ಈ ರೀತಿ ರಾಜ್ಯವು ತನ್ನ ವರ್ಷದ ಮೊದಲ ಏವಿಯನ್ ಇನ್ಫ್ಲುಯೆನ್ಸ ಪ್ರಕರಣಗಳನ್ನು ದಾಖಲಿಸಿದೆ