ಕೊಡಗಿನ ಮೇಲೆ ಅಪಾರ ಪ್ರೀತಿಹೊಂದಿದ್ದ ಬಿಪಿನ್ ರಾವತ್

Prasthutha|

ಮಡಿಕೇರಿ: ಯೋಧರ ನಾಡು ಕೊಡಗಿನ ಮೇಲೆ ಸೇನಾಪಡೆಗಳ ಮುಖ್ಯಸ್ಥ ಹುತಾತ್ಮ ಬಿಪಿನ್ ರಾವತ್ ವಿಶೇಷ ಒಲವು ಹೊಂದಿದ್ದರು. ಇದರಿಂದಲೇ ಕೊಡಗಿಗೆ ನಾಲ್ಕು ಬಾರಿ ಆಗಮಿಸಿ ವಿಶೇಷ ಕೊಡುಗೆ ನೀಡಿದ್ದರು.  2019ರ ಆಗಸ್ಟ್ 7 ರಂದು ಮೊದಲ ಬಾರಿಗೆ ಕೊಡಗಿಗೆ ಬಂದು ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾದ ವತಿಯಿಂದ ನಡೆದ ನಿವೃತ್ತ ಯೋಧರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ರಾವತ್ ದಕ್ಷಿಣ ವಲಯ ಕಮಾಂಡರ್ ಇನ್ ಆರ್ಮಿ ಚೀಫ್ ಆಗಿದ್ದರು.

- Advertisement -

ಭೂಸೇನಾ ಮುಖ್ಯಸ್ಥರಾದ ಬಳಿಕ 2021ರ ನವೆಂಬರ್ 4 ರಂದು ಕೊಡಗಿಗೆ ಆಗಮಿಸಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಆರವಣದಲ್ಲಿ ನಿರ್ಮಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್ ತಿಮ್ಮಯ್ಯ  ಪ್ರತಿಮೆಗಳ ಅನಾವರಣಗೊಳಸಿದ್ದರು. ಬಳಿಕ 2021ರ ಫೆಬ್ರವರಿ 6 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಜೊತೆ ಆಗಮಿಸಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಗೊಳಿಸಿದ್ದರು.

ಬಿಪಿನ್ ರಾವತ್ ಅವರಿಗೆ ಕೊಡಗು ಜಿಲ್ಲೆಯ ಮೇಲೆ ವಿಶೇಷ ಪ್ರೀತಿ ಇತ್ತು. ಹೀಗಾಗಿಯೇ ತಿಮ್ಮಯ್ಯ ಮ್ಯೂಸಿಯಂಗೆ ಯುದ್ಧ ಟ್ಯಾಂಕರ್, ಮಿಗ್ ಯುದ್ಧ ವಿಮಾನ, ತಿಮ್ಮಯ್ಯ ಅವರು ಸೇನೆಯಲ್ಲಿದ್ದಾಗ ಬಳಸುತ್ತಿದ್ದ ಯುದ್ಧ ಬಂದೂಕುಗಳು ಸೇರಿದಂತೆ ಅಗತ್ಯವಿರುವ ಸೇನೆಯ ಪರಿಕರಗಳನ್ನು ನೀಡುವಂತೆ ಮನವಿ ಸಲ್ಲಿಸಿದ ವೆಳೆ ಮರುಮಾತನಾಡದೆ ಎಲ್ಲವನ್ನೂ ಒದಗಿಸಿಕೊಟ್ಟಿದ್ದರು.

Join Whatsapp