100 ಕೋಟಿ ರೂಪಾಯಿ ಮೌಲ್ಯದ ಹೆಲಿಕಾಪ್ಟರ್ ಖರೀದಿಸಿದ ಕೇರಳದ ಉದ್ಯಮಿ !

Prasthutha|

ತಿರುವನಂತಪುರಂ: ಕೇರಳದ ಖ್ಯಾತ ಉದ್ಯಮಿ, RP ಗ್ರೂಪ್ ಮುಖ್ಯಸ್ಥ ಬಿ. ರವಿ ಪಿಳ್ಳೈ ಅವರು ಬರೋಬ್ಬರಿ ನೂರು ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಏರ್’ಬಸ್ H-145 ಹೆಲಿಕಾಪ್ಟರ್’ಅನ್ನು ಖರೀದಿಸಿದ್ದಾರೆ. 5 ರೆಕ್ಕೆಗಳುಳ್ಳ ಏರ್ ಬಸ್ D3, H-145 ಹೆಲಿಕಾಪ್ಟರ್ ಖರೀದಿಸಿದ ಏಷ್ಯಾದ ಮೊದಲ ವ್ಯಕ್ತಿ ಎಂಬ ಕೀರ್ತಿಯನ್ನು ರವಿ ಪಿಳ್ಳೈ ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವದಲ್ಲಿ ಈ ಮಾದರಿಯ ಕೇವಲ 1500 ಹೆಲಿಕಾಪ್ಟರ್’ಗಳನ್ನು ನಿರ್ಮಿಸಲಾಗಿದ್ದು, ಇಬ್ಬರು ಪೈಲಟ್ ಸೇರಿದಂತೆ ಒಟ್ಟು 9 ಮಂದಿಗೆ ಪ್ರಯಾಣ ಮಾಡಲು ಸಾಧ್ಯವಾಗುವಂತೆ ಮರ್ಸಿಡಿಸ್ ಬೆನ್ಝ್‌ ಕಂಪನಿಯು ಇದರ ಒಳಾಂಗಣವನ್ನು ಮರು ವಿನ್ಯಾಸ ಮಾಡಿದೆ. ಒಂದು ಸಣ್ಣ ಫ್ರಿಜ್ ಕೂಡ ಇದರಲ್ಲಿದೆ.
ಕೇರಳದ ರಾಜಧಾನಿ ತಿರುವನಂತಪುರಂ’ನ ಕೋವಳಂನಲ್ಲಿರುವ RP ಗ್ರೂಪ್’ನ ಹೆಲಿಪ್ಯಾಡ್’ಗೆ ಏರ್ ಬಸ್ ಕಂಪನಿಯು ಹೆಲಿಕಾಪ್ಟರ್ ಮೊದಲ ಬಾರಿಗೆ ಬಂದಿಳಿದಿದ್ದು, ಬಳಿಕ RP ಗ್ರೂಪ್’ನ ಮುಖ್ಯಸ್ಥರಾದ ರವಿ ಪಿಳ್ಳೈ ಅವರು ಕೊಲ್ಲಂನ ಅಷ್ಟಮುಡಿಯಲ್ಲಿರುವ ತಮ್ಮ ಮಾಲೀಕತ್ವದ ಹೊಟೇಲ್’ಗೆ ಚೊಚ್ಚಲ ಪ್ರಯಾಣ ಬೆಳೆಸಿದರು. ಪ್ರಸಿದ್ಧ ಧಾರ್ಮಿಕ ತಾಣ ಗುರುವಾಯೂರ್’ನಲ್ಲಿ ಗುರುವಾರದಂದು ಹೆಲಿಕಾಪ್ಟರ್’ಗೆ ಪೂಜೆ ನಡೆಸಲಾಗಿದ್ದು, ಇದರ ವೀಡಿಯೋ ವೈರಲ್ ಆಗಿದೆ



Join Whatsapp