ಬಿಲ್ಕಿಸ್ ಬಾನು ಅತ್ಯಾಚಾರ ಅಪರಾಧಿಗಳ ಬಿಡುಗಡೆ ವಿರೋಧಿಸಿ ಸಿಂದಗಿಯಲ್ಲಿ ಪ್ರತಿಭಟನೆ

Prasthutha|

ಸಿಂದಗಿ: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗುಜರಾತ್ ಸರಕಾರ ಜೈಲಿನಿಂದ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ ಸಿಂದಗಿಯಲ್ಲಿ ನ್ಯಾಷನಲ್ ವಿಮೆನ್ಸ್ ಫ್ರಂಟ್, ಮಹಿಳಾ ಸಂಘಟನೆ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.

- Advertisement -

ಸಿಂದಗಿಯ ಬಾಬಾ ಸಾಹೇಬ್ ಅಂಬೇಡ್ಕರ ವೃತ್ತದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಸಂಘಟನೆಯ ತಾಲೂಕು ಸಂಚಾಲಕಿ ರಮಿಝಾ ಬಾಗವಾನ ಹಾಗು ಸಾರಾಬಿ ಶೇಕ್, ಮಾಸಾಬಿ ಬಳಗಾನೂರ, ಗುಲ್ಶನ್ ನದಾಫ್  ಮಾತನಾಡಿ, ದೇಶದೆಲ್ಲೆಡೆ ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಗುಜರಾತ್ ಸರಕಾರ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11  ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವ ಮೂಲಕ ಹಿಂದುತ್ವ ಅಪರಾಧಿಗಳ ರಕ್ಷಣೆಗೆ ಕಾನೂನನ್ನು ದುರುಪಯೋಗ ಮಾಡಿಕೊಂಡಿದೆ. ಗುಜರಾತ್ ಸರಕಾರದ ಈ ನಡೆಗೆ  ಪ್ರಧಾನ ಮಂತ್ರಿ ಕೂಡ ಮೌನವಾಗಿರುವುದು ದೇಶದ ಮಹಿಳೆಯರಲ್ಲಿ ಅಸುರಕ್ಷತೆ ಹಾಗೂ ಭಯ ಉಂಟುಮಾಡಿದೆ. ಆದ ಕಾರಣ ರಾಷ್ಟ್ರಪತಿಗಳು ಕೂಡಲೆ ಮಧ್ಯಪ್ರವೇಶಿಸಿ ಈ ಆದೇಶವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

  ಇಂತಹ ಹೀನ ಕೃತ್ಯವೆಸಗಿದ ಕ್ರೂರಿಗಳನ್ನು ಕಠಿಣ ಶಿಕ್ಷೆಗೊಳಪಡಿಸುವುದರ ಮೂಲಕ ಒಂದು ಸುರಕ್ಷಿತ ಹಾಗೂ ಭಯ ಮುಕ್ತ ಜೀವನ ಸಾಗಿಸಲು ಅವಕಾಶ ಒದಗಿಸಬೇಕು ಎಂದು ರಮೀಝಾ ಬಾಗವಾನ್ ಆಗ್ರಹಿಸಿದರು.



Join Whatsapp