ಜಾತಿ ಆಧಾರಿತ ಜನಗಣತಿ ವರದಿ ಬಿಡುಗಡೆ ಮಾಡಿದ ಬಿಹಾರ ಸರ್ಕಾರ

Prasthutha|

- Advertisement -

ಅಲ್ಪಸಂಖ್ಯಾತರ ಶೇಕಡಾವಾರು ಎಷ್ಟು?

ಬಿಹಾರ: ರಾಜ್ಯ ಸರ್ಕಾರ ಜಾತಿ ಆಧಾರಿತ ಜನಗಣತಿಯ ವರದಿ ಬಿಡುಗಡೆ ಮಾಡಿದೆ. ಈ ಬಗ್ಗೆ ಬಿಹಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಇಂದು (ಸೆ.2) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

- Advertisement -

ಬಿಹಾರದಲ್ಲಿ ಹಿಂದುಳಿದ ವರ್ಗ 27.13% ಮತ್ತು ಅತ್ಯಂತ ಹಿಂದುಳಿದ ವರ್ಗ 36.01%, , ಸಾಮಾನ್ಯ ವರ್ಗ 15.52%. ಬಿಹಾರದ ಒಟ್ಟು ಜನಸಂಖ್ಯೆ 13 ಕೋಟಿಗಿಂತ ಹೆಚ್ಚಿದೆ ಎಂದು ಹೇಳಿದ್ದಾರೆ.

ಬಿಹಾರ 13 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ. ಈ ಪೈಕಿ ಹಿಂದೂ ಸಮುದಾಯದ ಜನಸಂಖ್ಯೆ 81.9%ದಷ್ಟು, ಮುಸ್ಲಿಂ ಜನಸಂಖ್ಯೆ 17.7%ದಷ್ಟು, ಕ್ರಿಶ್ಚಿಯನ್ 0.05%ದಷ್ಟು, ಸಿಖ್- 0.01%ದಷ್ಟು, ಬೌದ್ಧ 0.08%ದಷ್ಟು, ಜೈನ 0.0096%ದಷ್ಟು ಮತ್ತು ಇತರ ಧರ್ಮಗಳ ಜನಸಂಖ್ಯೆ 0.12%ದಷ್ಟು ಇದೆ ಎಂದು ಈ ಸಮೀಕ್ಷೆ ವಿವರಿಸಿದೆ.

ಸರ್ಕಾರದ ಮಾಹಿತಿ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ 6,41,31,992 ಪುರುಷರು, 6,11,38,460 ಮಹಿಳೆಯರು, 2,836 ತೃತಿಯ ಲಿಂಗಿಗಳಿದ್ದಾರೆ. ಇದರಲ್ಲಿ 19ರಷ್ಟು ಜನರನ್ನು ಪರಿಶಿಷ್ಟ ಜಾತಿ, 1.68% ಪರಿಶಿಷ್ಟ ಪಂಗಂಡ, 27.12% ಒಬಿಸಿ, 36.01% ಇಬಿಸಿ, 15.52% ಮೀಸಲಾತಿ ವ್ಯಾಪ್ತಿಗೆ ಬಾರದ ಜನರಿದ್ದಾರೆ. ಈ ಸಮೀಕ್ಷೆಗೆ ಸರ್ಕಾರ 500 ಕೋಟಿ.ರೂ ಖರ್ಚು ಮಾಡಿದೆ

Join Whatsapp