ಕೇವಲ ಐದು ನಿಮಿಷದ ಅಂತರದಲ್ಲಿ ಒಬ್ಬರೇ ಮಹಿಳೆಗೆ ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಎರಡೂ ಲಸಿಕೆ ನೀಡಿದ ಸಿಬ್ಬಂದಿ!

Prasthutha: June 19, 2021

ಪಾಟ್ನಾ : ಬಿಹಾರದ ಪಾಟ್ನಾ ಗ್ರಾಮಾಂತರದ ಮಹಿಳೆಯೊಬ್ಬರು ಕೇವಲ ಐದು ನಿಮಿಷದ ಅಂತರದಲ್ಲಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆ ಪಡೆದಿದ್ದಾರೆ. ಎರಡೂ ಲಸಿಕೆ ಪಡೆದ ಸುನೀಲಾ ದೇವಿ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ತಂಡ ಅವರ ಮೇಲೆ ತೀವ್ರ ನಿಗಾವಿರಿಸಿದೆ.

ಪಾಟ್ನಾ ಗ್ರಾಮಾಂತರದ ಪುನ್ಪುನ್‌ ಬ್ಲಾಕ್‌ ನ ಮಹಿಳೆ ಜೂ. 16ರಂದು ಈ ಎರಡೂ ಲಸಿಕೆಗಳನ್ನು ಕೇವಲ ಐದು ನಿಮಿಷದ ಅಂತರದಲ್ಲಿ ಪಡೆದಿದ್ದಾರೆ. ಜೂ. 16ರಂದು ಸುನೀಲಾ ದೇವಿ ಶಾಲೆಯೊಂದರಲ್ಲಿ ನಡೆದಿದ್ದ ಲಸಿಕೆ ಶಿಬಿರಕ್ಕೆ ತೆರಳಿದ್ದರು. ನೋಂದಣಿ ಪೂರ್ಣಗೊಂಡ ಬಳಿಕ, ಲಸಿಕೆಗಾಗಿ ಆಕೆ ಸಾಲಿನಲ್ಲಿ ನಿಂತು ಕೋವಿಶೀಲ್ಡ್‌ ಲಸಿಕೆ ಪಡೆದಿದ್ದಾರೆ.

ಲಸಿಕೆ ಪಡೆದ ಬಳಿಕ ಐದು ನಿಮಿಷ ಕಾಯುವಂತೆ ವೈದ್ಯಕೀಯ ತಂಡ ತಿಳಿಸಿದೆ. ಕೋಣೆಯೊಂದರಲ್ಲಿ ಕಾಯುತ್ತಿರುವಾಗ ಇನ್ನೊಬ್ಬ ನರ್ಸ್‌ ಬಂದು ಅವರಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಿದ್ದಾರೆ.

“ನಾನು ವೀಕ್ಷಣಾ ಕೋಣೆಯಲ್ಲಿ ಕೂತಿದ್ದೆ. ಇನ್ನೊಬ್ಬ ನರ್ಸ್‌ ಬಂದು ನನಗೆ ಲಸಿಕೆ ಕೊಡುತ್ತೇನೆ ಎಂದರು. ನನಗೆ ಈಗಾಗಲೇ ಲಸಿಕೆ ಕೊಟ್ಟಿದ್ದಾರೆ ಎಂದು ನಾನು ಹೇಳಿದೆ. ಆದರೆ, ಇನ್ನೊಂದು ಲಸಿಕೆ ಅದೇ ಕೈಗೆ ಕೊಡಬೇಕು ಎಂದು ನರ್ಸ್‌ ಹೇಳಿದರು” ಎಂದು ಸುನೀಲಾ ದೇವಿ ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ