ಬಿಹಾರ: ಒಂದು ವಾರದಲ್ಲಿ ಮೂರನೇ ಸೇತುವೆ ಕುಸಿತ

Prasthutha|

ಬಿಹಾರ: ರಾಜ್ಯದಲ್ಲಿ ಸೇತುವೆ ಕುಸಿತ ಸರಣಿ ಪ್ರಕರಣಗಳು ಮುಂದುವರಿದಿದ್ದು, ಒಂದು ವಾರದಲ್ಲಿ ಮೂರನೇ ಸೇತುವೆ ಕುಸಿತವಾಗಿದೆ. ಮೋತಿಹಾರಿಯಲ್ಲಿ ಇಂದು ನಿರ್ಮಾಣ ಹಂತದಲ್ಲಿದ್ದ ಕೋಟ್ಯಂತರ ರೂಪಾಯಿ ವೆಚ್ಚದ ಸೇತುವೆಯೊಂದು ಕುಸಿದು ಬಿದ್ದಿದೆ.

- Advertisement -

ಪೂರ್ವ ಚಂಪಾರಣ್‌ನ ಮೋತಿಹಾರಿಯ ಘೋರಸಾಹನ್ ಬ್ಲಾಕ್‌ನಲ್ಲಿರುವ ಚೈನ್‌ಪುರ ನಿಲ್ದಾಣದ ಪ್ರವೇಶ ರಸ್ತೆಯಲ್ಲಿ ಈ ಬಾರಿ ಸೇತುವೆ ಕುಸಿದ ಘಟನೆ ನಡೆದಿದೆ. ಸುಮಾರು 50 ಅಡಿ ಉದ್ದದ ಸೇತುವೆಯೊಂದನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಕಾಗುತ್ತಿತ್ತು. ಇದೀಗ ಆ ಸೇತುವೆ ನಿರ್ಮಾಣ ಹಂತದಲ್ಲಿದ್ದಾಗಲೇ ಕುಸಿದು ಬಿದ್ದಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಹೇಳಲಾಗಿದ್ದು, ಒಂದೇ ವಾರದ ಅವಧಿಯಲ್ಲಿ ಮೂರನೇ ಸೇತುವೆ ಕುಸಿದು ಬಿದ್ದಿದ್ದರಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬಿಹಾರದ ಸಿವಾನ್‌ನಲ್ಲಿ ನಿನ್ನೆ ಕೂಡ ಸೇತುವೆಯೊಂದು ಕುಸಿದ ಘಟನೆ ನಡೆದಿತ್ತು. ಇಲ್ಲಿ ಮಹಾರಾಜ್‌ಗಂಜ್-ದರೋಂಡಾ ವಿಧಾನಸಭೆಯ ಗಡಿಯನ್ನು ಸಂಪರ್ಕಿಸುವ ಸೇತುವೆ ಕಾರ್ಡ್‌ಗಳ ಡೆಕ್‌ನಂತೆ ರಾಶಿ ಬಿದ್ದಿತ್ತು. ಮಳೆಯಿಲ್ಲದ ಸಮಯದಲ್ಲೂ ಸೇತುವೆ ದುರ್ಬಲಗೊಂಡು ಕುಸಿದಿರುವುದು ಅಚ್ಚರಿ ಮೂಡಿಸಿದೆ. ಈ ಬಾರಿ ಚಂಡಮಾರುತವಾಗಲೀ ಮಳೆಯಾಗಲೀ ಬರಲಿಲ್ಲ, ಆದರೂ ಮಹಾರಾಜಗಂಜ್ ಪ್ರದೇಶದ ಪಟೇಧಿ-ಗರೌಲಿ ಸಂಪರ್ಕಿಸುವ ಕಾಲುವೆಯ ಮೇಲೆ ನಿರ್ಮಿಸಲಾದ ಸೇತುವೆ ಕುಸಿದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕಳೆದ ಮಂಗಳವಾರ, ಅರಾರಿಯಾದಲ್ಲಿ ಹೊಸದಾಗಿ ನಿರ್ಮಿಸಲಾದ ಸುಮಾರು 180 ಮೀಟರ್ ಉದ್ದದ ಸೇತುವೆ ಕುಸಿದಿದೆ. ಈ ಸೇತುವೆಯನ್ನು ಅರಾರಿಯಾದ ಸಿಕ್ತಿಯಲ್ಲಿ ಬಕ್ರಾ ನದಿಯ ಮೇಲೆ ನಿರ್ಮಿಸಲಾಗಿದೆ. ಈ ಸೇತುವೆ ಉದ್ಘಾಟನೆಯಾಗಬೇಕಿತ್ತು, ಆದರೆ ಅದಕ್ಕೂ ಮುನ್ನ ಸೇತುವೆ ಕುಸಿದಿದೆ.



Join Whatsapp