29 ಅಡಿ ಎತ್ತರದ ಮೊಬೈಲ್‌ ಟವರನ್ನೇ ಕದ್ದೊಯ್ದ ಖದೀಮರು!

Prasthutha|

ಪಾಟ್ನಾ:  ದೂರಸಂಪರ್ಕ ಕಂಪನಿಯ ತಂತ್ರಜ್ಞರ ಸೋಗಿನಲ್ಲಿ ಬಂದು 29 ಅಡಿ ಎತ್ತರದ ಮೊಬೈಲ್‌ ಟವರನ್ನೇ ಕದ್ದೊಯ್ದ ಘಟನೆ ಬಿಹಾರದ ಸಬ್ಜಿಬಾಘ್’ನಲ್ಲಿ ನಡೆದಿದೆ.

- Advertisement -

ಖದೀಮರು ಕದ್ದೊಯ್ದ ಈ ಟವರ್ ಜಿಟಿಎಲ್‌ ಕಂಪನಿಗೆ ಸೇರಿದ್ದಾಗಿದ್ದು, ಕಂಪನಿಯ ತಂತ್ರಜ್ಞರು ತಮ್ಮ ಕಂಪನಿಯ ಸಾಧನಗಳು ಎಲ್ಲೆಲ್ಲಿವೆ ಎಂದು ಸಮೀಕ್ಷೆ ಮಾಡುವಾಗ, ಈ ಟವರ್ ಕಾಣೆಯಾಗಿತ್ತು.

ಈ ಟವರ್ ಅನ್ನು ಶಹೀನ್‌ ಖಯೂಮ್‌ ಎಂಬವರಿಗೆ ಸೇರಿದ ನಾಲ್ಕು ಅಂತಸ್ತಿನ ಮನೆ ಮೇಲೆ ಸ್ಥಾಪಿಸಲಾಗಿತ್ತು. “ನಾವು ದೂರಸಂಪರ್ಕ ಕಂಪನಿಯ ತಂತ್ರಜ್ಞರು. ಟವರ್‌ನಲ್ಲಿ ಸಮಸ್ಯೆಯಿದೆ, ಹೊಸತನ್ನು ಹಾಕುತ್ತೇವೆ” ಎಂದು ಕೆಲವರು ಬಂದು ಟವರ್ ಅನ್ನು ತೆಗೆದುಕೊಂಡು ಹೋಗಿರುವುದಾಗಿ ಎಂದು ಶಹೀನ್‌ ಖಯೂಮ್ ತಿಳಿಸಿದ್ದಾರೆ.

- Advertisement -

ಜಿಟಿಎಲ್‌ನ ನೈಜ ತಂತ್ರಜ್ಞರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ಏರ್‌ಸೆಲ್‌ ಕಂಪನಿಯ ಒಡೆತನದಲ್ಲಿದ್ದ ಈ ಟವರ್‌ ಅನ್ನು 2016ರಲ್ಲಿ ಜಿಟಿಎಲ್‌ ಖರೀದಿ ಮಾಡಿತ್ತು.



Join Whatsapp