ಬಿಹಾರದ ನೂತನ ಶಿಕ್ಷಣ ಸಚಿವರಿಗೆ ರಾಷ್ಟ್ರಗೀತೆ ಹಾಡಲೂ ಬರುವುದಿಲ್ಲ | ವೀಡಿಯೊ ನೋಡಿ

Prasthutha|

ಪಾಟ್ನಾ : ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಎರಡು ದಿನಗಳಲ್ಲೇ ವಿವಾದವೊಂದು ಭುಗಿಲೆದ್ದಿದೆ. ನಿತೀಶ್ ಸರಕಾರದಲ್ಲಿ ನೂತನ ಶಿಕ್ಷಣ ಸಚಿವರಾಗಿ ನಿಯೋಜಿತರಾಗಿರುವ, ಮೇವಾಲಾಲ್ ಚೌಧರಿ ಅವರಿಗೆ ವಿಶ್ವವಿದ್ಯಾಲಯವೊಂದರ ಮಾಜಿ ಕುಲಪತಿಯಾಗಿದ್ದೂ, ರಾಷ್ಟ್ರಗೀತೆ ಹಾಡಲು ಬರುವುದಿಲ್ಲ. ಅಲ್ಲದೆ, ಅವರು ಬಿಹಾರ್ ಕೃಷಿ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದಾಗ ನೇಮಕಾತಿಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪವನ್ನೂ ಎದುರಿಸುತ್ತಿರುವ ಬಗ್ಗೆಯೂ ಪ್ರತಿಪಕ್ಷಗಳು ಆರೋಪಿಸಿವೆ.

ಮೇವಾಲಾಲ್ ಚೌಧರಿ ಓರ್ವ ಭ್ರಷ್ಟಾಚಾರ ಪ್ರಕರಣದ ಆರೋಪಿ ಎಂದು ಪ್ರಮುಖ ವಿಪಕ್ಷ ಆರ್ ಜೆಡಿ ಆಪಾದಿಸಿದ್ದು, ಶಿಕ್ಷಣ ಸಚಿವರಾಗಿ ಅವರಿಗೆ ರಾಷ್ಟ್ರಗೀತೆಯನ್ನು ಹಾಡಲೂ ಬರುವುದಿಲ್ಲ ಎಂದಿದೆ.

- Advertisement -

ಶಿಕ್ಷಣ ಸಚಿವ ಮೇವಾಲಾಲ್ ರಾಷ್ಟ್ರಗೀತೆಯನ್ನು ತಪ್ಪು ತಪ್ಪಾಗಿ ಹಾಡುವ ವೀಡಿಯೊವೊಂದನ್ನು ಶೇರ್ ಮಾಡಿರುವ ಆರ್ ಜೆಡಿ, ನಿತೀಶ್ ಕುಮಾರ್ ಅವರಲ್ಲಿ ನಾಚಿಕೆ ಇನ್ನೂ ಉಳಿದಿದೆಯಾ? ಅಂತರಾತ್ಮ ಎಲ್ಲಿ ಮುಳುಗಿದೆ? ಎಂದು ಪ್ರಶ್ನಿಸಿದೆ. ಅಲ್ಲದೆ, ಮೇವಾಲಾಲ್ ಅವರ ಪತ್ನಿಯ ಸಂದೇಹಾಸ್ಪದ ಸಾವಿನ ಕುರಿತು ತನಿಖೆಗೆ ಆಗ್ರಹಿಸಿರುವ ಕುರಿತ ಮಾಧ್ಯಮ ವರದಿಯನ್ನು ಕೂಡ ಅದು ಶೇರ್ ಮಾಡಿದೆ.

https://youtu.be/lKC49iqV0n8

ವೀಡಿಯೊ ಕೃಪೆ : ಜಖಾಸ್ ಭಾರತ್

- Advertisement -