ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಅತ್ಯಂತ ಬಡ ರಾಜ್ಯಗಳು: ನೀತಿ ಆಯೋಗ

Prasthutha|

ನವದೆಹಲಿ: ಬಿಹಾರ,ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ದೇಶದಲ್ಲೇ ಅತ್ಯಂತ ಬಡತನದಲ್ಲಿರುವ ರಾಜ್ಯಗಳಾಗಿವೆ ಎಂದು ನೀತಿ ಆಯೋಗ ಬಿಡುಗಡೆ ಮಾಡಿರುವ ಬಡತನ ಸೂಚ್ಯಂಕ (MPI) ವರದಿಯಲ್ಲಿ ಬಹಿರಂಗವಾಗಿದೆ.

- Advertisement -

ಸೂಚ್ಯಂಕದ ಪ್ರಕಾರ, ಬಿಹಾರದ 51.91 ಶೇಕಡಾ ಜನಸಂಖ್ಯೆಯು ಬಡವರಾಗಿದ್ದರೆ, ಜಾರ್ಖಂಡ್‌ನಲ್ಲಿ 42.16 ಶೇಕಡಾ ಮತ್ತು ಉತ್ತರ ಪ್ರದೇಶದಲ್ಲಿ 37.79 ಶೇಕಡಾ, ಮಧ್ಯಪ್ರದೇಶ ಶೇ.36.65 ಮತ್ತು ಮೇಘಾಲಯ ಶೇ.32.67 ಅಂಕಗಳೊಂದಿಗೆ ಮೊದಲ ಐದು ಸ್ಥಾನಗಳನ್ನು ಅಲಂಕರಿಸಿವೆ.

ಅದೇ ರೀತಿ ಕೇರಳ (ಶೇ. 0.71), ಗೋವಾ (ಶೇ. 3.76), ಸಿಕ್ಕಿಂ (ಶೇ. 3.82), ತಮಿಳುನಾಡು (ಶೇ. 4.89) ಮತ್ತು ಪಂಜಾಬ್ (ಶೇ. 5.59) ರಾಜ್ಯಗಳು ಕಡಿಮೆ ಬಡತನವನ್ನು ದಾಖಲಿಸಿವೆ.



Join Whatsapp