ಬಿಹಾರ ಮೂರನೇ ಹಂತದ ಮತದಾನ ಆರಂಭ | 1204 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Prasthutha|

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದ ಮತದಾನ ಇಂದು ಬೆಳಗ್ಗೆ ಆರಂಭವಾಗಿದೆ. ಸುಮಾರು 78 ಕ್ಷೇತ್ರಗಳಲ್ಲಿ, 2.34 ಕೋಟಿ ಮತದಾರರು 1,204 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ನಿರ್ಧರಿಸಲಿದ್ದಾರೆ.

- Advertisement -

ಅ.28ರಂದು ಮತದಾನ ಆರಂಭವಾಗಿದ್ದು, ಅಂದು 71 ಸ್ಥಾನಗಳಿಗೆ ಶೇ.55ರಷ್ಟು ಮಾತ್ರ ಮತದಾನವಾಗಿತ್ತು. ಎರಡನೇ ಹಂತದ ಮತದಾನ ನ.5ರಂದು ನಡೆದಿದ್ದು, ಶೇ.53ರಷ್ಟು ಮಾತ್ರ ಮತದಾನ ನಡೆದಿದ್ದು, 94 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.

ಕೋಸಿ-ಸೀಮಾಂಚಲ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದೆ. ಬಿಜೆಪಿ ನಾಯಕ ಸುರೇಶ್ ಶರ್ಮಾ, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಸಂಬಂಧಿ ನೀರಜ್ ಕುಮಾರ್ ಸಿಂಗ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷಿನಿ ಶರದ್ ಯಾದವ್ ಕಣದಲ್ಲಿರುವ ಪ್ರಮುಖರು. ನ.10ರಂದು ಮತ ಎಣಿಕೆ ನಡೆಯಲಿದೆ.

Join Whatsapp