ಬಿಹಾರ ಚುನಾವಣೆಯ ಮೇಲೆ ಪರಿಣಾಮ ಬೀರಲಿರುವ ನಿರುದ್ಯೋಗ, ವಲಸೆ ಕಾರ್ಮಿಕರ ಸ್ಥಿತಿ

Prasthutha|

- Advertisement -

ಹೊಸದಿಲ್ಲಿ: ಐಎನ್ಎಸ್ ಸಿ-ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಮುಂದಿನ ವಿಧಾನ ಸಭಾ ಚುನಾವಣೆಯ ವೇಳೆ ಬಿಹಾರದ ಶೇ.25 ಮತದಾರರು ರಾಜ್ಯದಲ್ಲಿ ನಿರುದ್ಯೋಗ ಮತ್ತು ಹಿಂದಿರುಗಿರುವ ವಲಸೆ ಕಾರ್ಮಿಕರ ಸ್ಥಿತಿಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಮತಚಲಾಯಿಸಲಿದ್ದಾರೆ.

ಮತದಾರರ ಮನಸ್ಸಿನಲ್ಲಿರುವ ಇನ್ನೊಂದು ಪ್ರಮುಖ ವಿಷಯ ಆರೋಗ್ಯವಾಗಿದೆ. ಪ್ರತಿಕ್ರಿಯಿಸಿದ ಶೇ.12.9 ಮಂದಿಯ ಪ್ರಕಾರ ಅವರು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಆಸ್ಪತ್ರೆ ಮತ್ತು ಔಷಧಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಲಿದ್ದಾರೆ.

- Advertisement -

ಸಮೀಕ್ಷೆಯ ಪ್ರಕಾರ ಶೇ.9.5 ಮಂದಿ ಶೈಕ್ಷಣಿಕ ಸೌಲಭ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಮತ ಚಲಾಯಿಸಲಿದ್ದಾರೆ. ಅದೇ ವೇಳೆ, ಶೇ.7.7 ಮಂದಿ ರಾಜ್ಯದಲ್ಲಿರುವ ಕಾನೂನು ಸುವ್ಯವಸ್ಥೆ ಮತ್ತು ಮಹಿಳಾ ಸುರಕ್ಷತೆಯ ವಿಷಯಗಳು ಪ್ರಮುಖ ವಿಷಯವಾಗಿ ಆಯ್ಕೆಮಾಡಿಕೊಳ್ಳಲಿದ್ದಾರೆ.

Join Whatsapp